ಹಣ ತುಂಬಿದ್ದ ಬ್ಯಾಗನ್ನು ರೈಲಿನಲ್ಲೇ ಬಿಟ್ಟ ಮಹಿಳೆ, ಮುಂದೇನಾಯ್ತು..?

Rail
Published on

ಕಾರವಾರ: ಬೆಂಗಳೂರು-ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಮರೆತು ಗಿದ್ದ ಹಣ ತುಂಬಿದ್ದ ಬ್ಯಾಗನ್ನು ಕೊಂಕಣ ರೈಲ್ವೆ ಹಾಗೂ ಆರ್‌ಪಿಎಫ್ ಅಧಿಕಾರಿಗಳು ಪ್ರಯಾಣಿಕರಿಗೆ ಮರಳಿಸಿದ್ದಾರೆ.
ಕೊಂಕಣ ರೈಲ್ವೆ ಟಿಟಿಇ ಮಾರುತಿ ನಾಯ್ಕ ಸೋಮವಾರ ರೈಲಿನಲ್ಲಿ ವ್ಯಾನಿಟಿ ಬ್ಯಾಗ್ ಗಮನಿಸಿ ತೆಗೆದಿರಿಸಿದ್ದರು. ನಂತರ ಸಿಟಿ ಸಂದೀಪ ಕುಮಾರ್ ಎಂಬುವವರು ಅದನ್ನು ಕಾರವಾರ ಆರ್‌ಪಿಎಫ್ ಅಧಿಕಾರಿಗಳಿಗೆ ಮುಟ್ಟಿಸಿದ್ದರು. ಬೆಂಗಳೂರು ಮಹಾಲಕ್ಷ್ಮೀಪುರಂ ನಿವಾಸಿ ಜಯಶ್ರೀ ವೆಂಕಟಾದ್ರಿ ಅವರು ಮಧ್ಯಾಹ್ನ 12.30 ಕ್ಕೆ ಆರ್‌ಪಿಎಫ್ ಠಾಣೆಯನ್ನು ಸಂಪರ್ಕಿಸಿ ದಾಖಲೆ ನೀಡಿ ಬ್ಯಾಗ್ ವಾಪಸ್ ಪಡೆದಿದ್ದಾರೆ. ಬ್ಯಾಗ್‌ನಲ್ಲಿ 25,732 ರೂ.ನಗದು ಹಾಗೂ ದಾಖಲೆಗಳಿದ್ದವು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net