

ಬಾಗಲಕೋಟೆ: ಹಗ್ಗ, ಜಾನುವಾರುಗಳಿಗೆ ಗಂಟೆ, ಪ್ಲಾಸ್ಟಿಕ್ ತುಂಬಿದ್ದ ಟಂಟಂಗೆ ಯಾರೂ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ನಗರದ ಹಳೇ ಅಂಜುಮನ ಶಾಲೆಯ ಬಳಿ ನಿಲ್ಲಿಸಿದ್ದ ಟಂಟಂಗೆ ಬೆಂಕಿ ಹತ್ತಿ ಅದರಲ್ಲಿ ಇದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಸುಟ್ಟಿರುವ ವಸ್ತುಗಳು ಹಾಗೂ ವಾಹನ ರಮ್ಜಾನ ದೊಡ್ಡಮನಿ ಎನ್ನುವವರಿಗೆ ಸೇರಿದ್ದು. ಹಳ್ಳ, ಪಟ್ಟಣಗಳ ಸಂತೆಗಳಿಗೆ ಹೋಗಿ ಜಗ್ಗ, ಜಾನುವಾರುಗಳ ಕೊರಳಿಗೆ ಕಟ್ಟುವ ಗಂಟೆ ಮೊದಲಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಅದರಿಂದ ಜೀವನ ಸಾಗಿಸುತ್ತಿದ್ದ. ಇದೀಗ ಯಾರೂ ಅವುಗಳಿಗೆಲ್ಲ ಬೆಂಕಿ ಹಚ್ಚಿದ್ದರಿಂದ ಬಡ ವ್ಯಾಪಾರಿಗೆ ತುಂಬ ನಷ್ಟವಾಗಿದೆ. ಬಾಗಲಕೋಟೆ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.