

ಅಶೋಕ ಶೆಟ್ಟರ, ಬಾಗಲಕೋಟೆ: ಯುನಿಟ್-೩ ಅಭಿವೃದ್ಧಿ ಪಡಿಸಲು ಅನುದಾನ ಬರುತ್ತಿಲ್ಲ. ಮತ್ತೊಂದೆಡೆ ಯುನಿಟ್-೨ ಕಾಮಗಾರಿ ಎಲ್ಲ ಮುಗಿದಿದ್ದರೂ ಸಂತ್ರಸ್ತರಿಗೆ ಹಕ್ಕುಪತ್ರ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ಯಾವ ಸದುದ್ದೇಶದಿಂದ ಸರ್ಕಾರ ಬಿಟಿಡಿಎ ಸ್ಥಾಪನೆ ಮಾಡಿತ್ತೋ ಅದನ್ನೆ ಮರೆತಿದ್ದಾರೇನೋ ಎನ್ನುವ ಅನುಮಾನಗಳು ಕಾಡತೊಡಗಿವೆ...!
ಸಿದ್ದರಾಮಯ್ಯ ಸರ್ಕಾರ ಅಽಕಾರಕ್ಕೆ ಬಂದು ೧೮ ತಿಂಗಳು ಕಳೆದಿವೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರಕ್ಕೆ ಶಾಸಕ ಎಚ್.ವೈ.ಮೇಟಿ ಅವರು ಅಧ್ಯಕ್ಷರಾಗಿ ಅಽಕಾರ ವಹಿಸಿಕೊಂಡು ೮ನೇ ತಿಂಗಳು ಆರಂಭವಾಗಿದೆ. ಆದರೆ, ಪ್ರಾಽಕಾರಕ್ಕೆ ಸದಸ್ಯರನ್ನು ಮಾತ್ರ ನೇಮಕ ಮಾಡುವ ಗೋಜಿಗೆ ಹೋಗಿಲ್ಲ. ಇದರ ಜೊತೆಗೆ ಬಿಟಿಡಿಎ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. -É. ೧೭ ರಂದು ನಡೆದಿದ್ದ ಸಭೆ ಮತ್ತೆ ಕರೆದಿಲ್ಲ.
ಆಲಮಟ್ಟಿ ಜಲಾಶಯಕ್ಕೆ ಆಸ್ತಿ-ಪಾಸ್ತಿ ಕಳೆದುಕೊಂಡ ಸಂತ್ರಸ್ತರ ತ್ಯಾಗ ಅಪಾರ. ಅವರಿಗೆ ಗೌರಯುತ ಬದುಕು ಕಟ್ಟಿಕೊಡುವುದು ಸರ್ಕಾರದ ಕರ್ತವ್ಯ ಎನ್ನುವ ಮಾತುಗಳು ಬರೀ ಭಾಷಣಕ್ಕೆ ಸೀಮಿತವಾಗಿವೆ ವಿನಃ ಅದು ಜಾರಿಗೆ ಬರುತ್ತಿಲ್ಲ. ಮೂಲ ಸಂತ್ರಸ್ತರಿದ್ದರೂ ಕೈಬೆಚ್ಚಗೆ ಮಾಡದೇ ಕೆಲಸ ಆಗಲ್ಲ ಎನ್ನುವ ಮಾತುಗಳು ಬಿಟಿಡಿಎ ಕಚೇರಿಯ ಗೋಡೆ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿವೆ.
ಸರ್ಕಾರ ನೂರಾರು ಕೋಟಿ ರೂ. ಖರ್ಚು ಮಾಡಿ ಬಾಗಲಕೋಟೆ ಯುನಿಟ್-೨ ಅಭಿವೃದ್ಧಿ ಪಡಿಸಿದೆ. ಒಟ್ಟು ೧೩೩೩ ಎಕರೆ ವಿಸ್ತೀರ್ಣದಲ್ಲಿ ಕ್ಷೇತ್ರ ಅಭಿವೃದ್ಧಿ ಪಡಿಸಿದ್ದು, ೧೩೮೫೦ ನಿವೇಶನಗಳು ಇವೆ. ಇದರಲ್ಲಿ ೩೧೪೯ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕು. ಆದರೆ, ಕಳೆದ ಏಳೆಂಟು ವರ್ಷದಲ್ಲಿ ಈ ವರೆಗೂ ೬೨೮೪ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ, ಈಗ ಒಂದುವರೆ ವರ್ಷದಲ್ಲಿ ನಿವೇಶನಗಳ ಹಕ್ಕುಪತ್ರ ಕೊಟ್ಟಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ.
ಇನ್ನು ಮುಖ್ಯವಾಗಿ ಬಿಟಿಡಿಎನಲ್ಲಿ ದುಡ್ಡಿಲ್ಲದೇ ಯಾವುದೇ -ÉÊಲ್ ಮುಂದಕ್ಕೆ ಹೋಗಲ್ಲ ಎನ್ನುವುದು ಜಗಜ್ಜಾಹೀರು. ಆದರೆ, ಅಽಕಾರದಲ್ಲಿ ಇರುವ ಪಕ್ಷಗಳು ಮಾತ್ರ ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಸಿದ್ಧ ಉತ್ತರ ಕೊಡುತ್ತಲೇ ಬಂದಿದ್ದಾರೆ. ಅರ್ಹ -Àಲಾನುಭವಿ ಇದ್ದರೂ ಸಹ ಸುಲಭವಾಗಿ ಕೆಲಸ ಆಗಲ್ಲ. ಇದಕ್ಕೆ ಕಡಿವಾಣ ಮಾತ್ರ ಬೀಳುತ್ತಿಲ್ಲ, ಸಂತ್ರಸ್ತರು ಕಚೇರಿಗೆ ಅಲೆದಾಟ, ಕೆಲಸ ಆಗದೇ ಪರದಾಟ ಮಾತ್ರ ನಿಂತಿಲ್ಲ.
ಪ್ರಭಾರದಲ್ಲಿ ಪುನರ್ ವಸತಿ ಅಽಕಾರಿ :
ಬಿಟಿಡಿಎನಲ್ಲಿ ಪೂರ್ಣ ಪ್ರಮಾಣದ ಸಮಿತಿ ಇಲ್ಲ. ಇನ್ನು ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪುನರ್ ವಸತಿ ಅಽಕಾರಿ ಹುದ್ದೆಗೆ ಪೂರ್ಣಾವಽ ಅಽಕಾರಿ ಇಲ್ಲ. ಪ್ರಭಾರದಲ್ಲಿ ಇರುವ ಅಽಕಾರಿಗೆ ಈ ಬಗ್ಗೆ ಅಳ ಅಗಲ ತಿಳಿದಂತಿಲ್ಲ. ಸಂತ್ರಸ್ತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಅವರಿಗೆ ಯಾವುದೇ ಉತ್ತರವೂ ಸಿಗಲ್ಲ, ಪ್ರತಿಕ್ರಿಯೆಯನ್ನು ನೀಡಲ್ಲ. ಆ ದಾಖಲೆ, ಈ ದಾಖಲೆ ಎಂದು ಅಲೆದಾಡಿಸುತ್ತಾರೆ ಎನ್ನುವ ಆರೋಪಗಳು ಇವೆ. ಮುಂದುವರೆದು -ÉÊಲ್ ಗಳು ಸಿಗುತ್ತಿಲ್ಲ, ಕಾಣೆಯಾಗಿವೆ ಎನ್ನುವ ಉತ್ತರ ನೀಡುತ್ತಾರೆ.
ಜನರಿಗೆ ಉತ್ತರ ಹೇಳಲಾಗುತ್ತಿಲ್ಲ :
ಬಿಟಿಡಿಎಯಲ್ಲಿ ಸಂತ್ರಸ್ತರಿಗೆ ಅಲೆದಾಡಿಸಿದೇ ವೇಗವಾಗಿ ಕೆಲಸ ಮಾಡಿಕೊಡುತ್ತೇವೆ ಎಂದು ಚುನಾವಣೆಯಲ್ಲಿ ಸಂತ್ರಸ್ತರಿಗೆ ಅಭಯ ನೀಡಿ ಮತ ಕೇಳಿದ್ದೇವೆ. ಆದರೆ, ಅದು ಇನ್ನೂ ಜಾರಿಗೆ ಬಂದಿಲ್ಲ. ಮೂಲ ಸಂತ್ರಸ್ತರ ಕಡೆಗೂ ಅಽಕಾರಿಗಳ ದುಡ್ಡು ಪಡೆಯುತ್ತಾರೆ ಎನ್ನುವ ದೂರುಗಳು ಕೇಳಿ ಬರುತ್ತವೆ. ಕೊನೆಗೆ ಮನೆಗೆ ಎನ್‌ಒಸಿ ಕೊಡಲು ಸಹ ಅಽಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಜನರಿಗೆ ಏನು ಉತ್ತರ ಕೊಡಬೇಕು ಎಂದು ತಿಳಿಯದಾಗಿದೆ. ಈ ಬಗ್ಗೆ ಜನಪ್ರತಿನಿಽಗಳು ಗಮನ ಹರಿಸಬೇಕು ಎಂದು ಕಾಂಗ್ರೆಸ್‌ನ ಓರ್ವ ಮುಖಂಡ ಹೇಳುತ್ತಾರೆ.