

ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಎಸ್.ಎಂ.ಕೃಷ್ಣ ಆಶ್ರಯ ಕಾಲನಿಯ ನಿವಾಸಿಗಳಿಗೆ ಮನೆಗಳು ಮಂಜೂರಾಗಿ ಹನ್ನೆರಡು ವರ್ಷಗಳು ಕಳೆದರೂ ಹಕ್ಕು ವಿತರಣೆ ಮಾಡಲು ಹಿಂದೆ ಮುಂದೆ ನೋಡುತ್ತಿರುವುದನ್ನು ಖಂಡಿಸಿ ಮತ್ತು ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಗರದಲ್ಲಿ ಬಡಾವಣೆಯ ನಿವಾಸಿಗಳು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕಾಲನಿಯಿಂದ ನಗರದ ಜಗತ್ ವತ್ತಕ್ಕೆ ಆಗಮಿಸಿ ಜಮಾಗೊಂಡ ನೂರಾರು ನಿವಾಸಿಗಳು ಜೈ ಕನ್ನಡಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಹಾನಗರ ಪಾಲಿಕೆಯವರೆಗೂ ಮೆರವಣಿಗೆ ಮೂಲಕ ತೆರಳಿ ಅಲ್ಲಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗೆ ಸ್ಪಂದಿಸುವAತೆ ಆಗ್ರಹಿಸಿದರು.
ಕಲಬುರಗಿಯ ಸರ್ವೆ ನಂಬರ್ ೭೫ ಮತ್ತು ೭೬ರಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಅಲ್ಲಿ ವಾಸವಾಗಿz್ದೆÃವೆ. ಇಷ್ಟಿದ್ದೂ ಇನ್ನೂ ಹಕ್ಕು ಪತ್ರಗಳನ್ನು ಅಲ್ಲಿರುವ ನಿವಾಸಿಗಳಿಗೆ ನೀಡುತ್ತಿಲ್ಲ. ಬಡವರು, ಮನೆ ಇಲ್ಲದವರು ಈಗಾಗಲೇ ಅಲ್ಲಿ ವಾಸವಾಗಿದ್ದಾರೆ. ಆದರೆ,ಮಹಾನಗರ ಪಾಲಿಕೆ ಅಧಿಕಾರಿಗಳು ಅಲ್ಲಿದ್ದರನ್ನು ಬಿಟ್ಟು, ಪ್ರಭಾವಿಯಾಗಿರುವ ಶ್ರೀಮಂತರಿಗೆ ಹಕ್ಕುಪತ್ರಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.