

ಬಾಗಲಕೋಟೆ: ದೇಶದಲ್ಲಿ ಹಿಂದುಗಳು ಸಂಘಟನೆ ಆಗುವದಿಲ್ಲ. ಒಂದಾಗಿ ಇರೋವದಿಲ್ಲ ಅಂತ ಇತ್ತು. ಈ ಆಪಾದನೆ ಆರ್‌ಎಸ್‌ಎಸ್ ಸಂಘಟನೆ ಸುಳ್ಳು ಮಾಡಿದೆ. ಸಂಘದಲ್ಲಿ ಅಸ್ಪÈಶ್ಯತೆ ಎಂಬುವುದು ಇಲ್ಲ. ರಾಷ್ಟ್ರೀಯ ವಿಚಾರಗಳಿಂದ ಮಾತ್ರ ಸ್ವಾವಲಂಬಿ ಸಮರ್ಥ ಭಾರತ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹ ನಾ.ತಿಪ್ಪೆಸ್ವಾಮಿ ಹೇಳಿದರು.
ಆರ್.ಎಸ್.ಎಸ್.ವಾರ್ಷಿಕೋತ್ಸವ ಹಿನ್ನಲೆಯಲ್ಲಿ ನಗರದ ಬಿವಿವಿ ಸಂಘದ ಮೈದಾನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಒಂದು ಶತಮಾನ ಹಿಂದೆ ಸ್ಥಾಪಿತವಾದ ಸಂಘವು ತನ್ನ ಕಾರ್ಯವನ್ನು ಪ್ರತಿ ಹಂತದಲ್ಲಿ ವಿಸ್ತರಿಸುತ್ತಾ ಬಂದಿದೆ. ದೇಶಕ್ಕೆ ಆಪತ್ತು, ವಿಪತ್ತು ಬಂದಾಗ ಯುದ್ಧ, ನೆರೆ, ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ತನ್ನ ಪ್ರಾಣ ಲೆಕ್ಕಿಸದೇ ಸೇವೆ ನೀಡಿದೆ. ಕಾವಲಗಾರನಾಗಿ ಸದಾಕಾಲ ನಿಂತಿದೆ. ರಾಷ್ಟ್ರಾಭಿಮಾನದ ಧ್ಯೇಯ ಇಟ್ಟುಕೊಂಡು ಹೆಜ್ಜೆ ಇಟ್ಟಿದೆ ಎಂದರು.
ಇಂದು ೭೩ ಸಾವಿರ ಶಾಖೆಗಳನ್ನು ನಡೆಸುತ್ತಿದ್ದು, ೨೦೨೫ ಕ್ಕೆ ಮೂರು ಲಕ್ಷ ಶಾಖೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ದೇಶದ ಪ್ರತಿಯೊಂದು ಗ್ರಾಮಕ್ಕೆ ತಲುಪುವ ಪ್ರಯಾಣ ಆರಂಭಿಸಿದೆ. ಸಾಮಾಜಿಕ ಸಾಮರಸ್ಯ ತರಲು ಅನಿಷ್ಠ ಅಸ್ಪÈಶ್ಯತೆ ಹೊಡೆದೂಡಿಸಲು ಸದಾ ಬದ್ಧವಾಗಿದೆ. ಮಂದಿರ, ಮನೆಗಳಲ್ಲಿ ಸಮಾನ ಅವಕಾಶವಿದೆ. ನಾಗರಿಕ ಶಿಷ್ಠಾಚಾರದ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತನೆ ಮಾಡುತ್ತಿದೆ. ರಾಷ್ಟ್ರ, ಸೈನಿಕರ ಬಗ್ಗೆ ಗೌರವ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆಗೆ ಪ್ರಮುಖ ಆದ್ಯತೆ ನೀಡಿದೆ. ಲವ್ ಜಿಹಾದ್ ನಮ್ಮ ಸಂಸ್ಕೃತಿ, ಪರಂಪರೆ ನಾಶ ಮಾಡುತ್ತಿದ್ದು, ಪಾಶ್ಚಾತ್ ಸಂಸ್ಕೃತಿಯಿಂದ ಯುವ ಪೀಳಿಗೆ ಹಾಳಾಗುತ್ತಿದ್ದು, ಪ್ರತಿಯೊಂದು ಕುಟುಂಬವು ಇದರಿಂದ ಎಚ್ಚರವಿರಬೇಕು ಎಂದು ಸಂದೇಶ ನೀಡಿದರು.
ಸಂಘವು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದಲಾವಣೆ ತರುತ್ತಿದೆ. ತನ್ನ ಕಾರ್ಯ, ಸೇವೆಯಿಂದ ವಿರೋಽಗಳ ಮನಸ್ಸು ಗೆದ್ದಿದೆ. ಹಿಂದು ಎಂದರೇ ಸಂಕುಚಿತ ಭಾವ ಕಾಲದಲ್ಲಿ ಸಂಘವು ಮಹತ್ತ ಕಾರ್ಯ ಮಾಡಿತು. ಪರಿಣಾಮ ಪ್ರತಿಯೊಂದು ಹಿಂದು ತಾನು ಹಿಂದು ಎನ್ನುವ ಸಂಗತಿ ಹೆಮ್ಮೆ ಪಡುತ್ತಿದ್ದಾರೆ. ಬಸವಣ್ಣ, ಅಂಬೇಡ್ಕರ, ಮಹಾತ್ಮ ಗಾಂಽ ಅವರ ಸಮಾನತೆಯ ಸಂದೇಶ ಅಕ್ಷರಶಃ ಜಾರಿಗೆ ತರುತ್ತಿದೆ. ಹಿಂದುಗಳು ಹೇಡಿ ಅಲ್ಲ ಅಂತ ಸಂಘ ಸಾಬೀತು ಪಡಿಸಿದೆ. ಒಗ್ಗಟ್ಟು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಕಾರ ಹೇಳಿಕೊಡುವ ಕೆಲಸ ಮಾಡುತ್ತಿದೆ.
ಧಾರವಾಡ ಕರಿಯರ್ ಅಕಾಡೆಮಿ ನಿರ್ದೇಶಕ ನಾಗನಗೌಡ ಮೇಲಗಿರಿಗೌಡ ಪಾಟೀಲ ಮಾತನಾಡಿ, ಭಾರತ ಪುಣ್ಯಭೂಮಿಯಾಗಿದೆ, ಐದು ಜನರಿಂದ ಆರಂಭಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದು ೬೦ ಲಕ್ಷ ಕಾರ್ಯಕರ್ತರನ್ನು ಹೊಂದಿದ ದೊಡ್ಡ ಸೇವಾ ಸಂಸ್ಥೆಯಾಗಿದೆ. ಜಗತ್ತಿನಲ್ಲಿಯೇ ಇಷ್ಟು ದೊಡ್ಡ ಸಂಘಟನೆ ಯಾವುದು ಇಲ್ಲ. ಬಾಗಲಕೋಟೆ ಪಥ ಸಂಚಲನ ಆನಂದ ಉಂಟು ಮಾಡಿದೆ. ಇಂದು ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ನಯ, ವಿನಯ ಶಿಸ್ತು ಜವಾಬ್ದಾರಿಯಿಂದ ಕಲಿಯಬೇಕು. ಸಮಾಜ ಸೇವೆ ಮಾಡುವ ಗುಣ, ಪ್ರಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸಂಘ ಚಾಲಕ ಚಂದ್ರಶೇಕರ ದೊಡ್ಡಮನಿ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಡಾ.ಸಿ.ಎಸ್.ಪಾಟೀಲ, ಡಾ.ಗಿರೀಶ ಮಾಸೂರಕರ, ಡಾ.ಶೇಖರ ಮಾನೆ, ಹೂವಪ್ಪ ರಾಠೋಡ, ಜಿ.ಎನ್.ಪಾಟೀಲ, ಅಶೋಕ ಲಿಂಬಾವಳಿ, ಬಸವರಾಜ ಯಂಕಂಚಿ, ಚಂದ್ರಶೇಕರ ದೊಡ್ಡಮನಿ ಇತರರು ಇದ್ದರು.