

ಬಾಗಲಕೋಟೆ: ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ನಿಸ್ವಾರ್ಥತೆಯಿಂದ ಕೆಲಸ ಮಾಡುವ ಆಡಳಿತ ಮಂಡಳಿಯಿಂದ ಮಾತ್ರ ಸಾಧ್ಯ ಎಂದು ಬಿವಿವಿ ಸಂಘಧ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯ, ಕರ್ನಾಟಕ ಸಾಹಿತ್ಯ ಸಂಘ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಲ್.ಜಿ ಹಿರೇಮಠ ಸಂಸ್ಮರಣೆ ಬಯಲ ಬೆಳಗು ಗ್ರಂಥ ಹಾಗೂ ಬಿವಿವಿಎಸ್ ಪ್ರಸಾರಾಂಗದ ಮೂರು ಗ್ರಂಥಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಾಗಲಕೋಟೆಯು ಕಡಿಮೆ ಜನಸಂಖ್ಯೆ ಹೊಂದಿರುವ ವಿಜಯಪುರ ಜೆಲ್ಲೆಯ ಒಂದು ಸಾಮಾನ್ಯ ತಾಲೂಕು ಆಗಿದ್ದ ಸಂದರ್ಭದಲ್ಲಿ ಒಂದು ಶಿಕ್ಷಣ ಸಂಸ್ಥೆ ಹುಟ್ಟಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಪ್ರೊ.ಎಲ್.ಜಿ ಹಿರೇಮಠ, ಆರ್.ಸಿ ಹಿರೇಮಠ ಅವರಂತಹ ಶಿಕ್ಷಕರ ಕೆಲಸಗಳೆ ಶಕ್ತಿ ಕಾರಣ. ಆಕಾಶ ಭೂಮಿ ಅಷ್ಟು ಪಾವಿತ್ರತೆ ಹೊಂದಿದ ವ್ಯಕ್ತಿತ್ವ. ಯಾವುದೆ ಸಂಸ್ಥೆ ಬೆಳವಣಿಗೆ ಆಗಬೇಕಾದರೆ ಇಂತಹ ವ್ಯಕ್ತಿಗಳ ಪಾತ್ರ ದೊಡ್ಡದು. ಪಠ್ಯ ಬೋಧನೆ ಮಾತ್ರ ಶಿಕ್ಷಣವಲ್ಲ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಶಿಕ್ಷಣ ಕೊಟ್ಟರೆ ಮಾತ್ರ ಅದು ಪರಿಪೂರ್ಣ ಶಿಕ್ಷಣ ಎಂದರು.
ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ ತಲ್ಲೂರು, ಪ್ರಾಚಾರ್ಯ ಡಾ.ವಿ.ಎಸ್ ಕಟಗಿಹಳ್ಳಿಮಠ, ನಿವೃತ್ತ ಸೇನಾಽಕಾರಿ ಜಿ.ಎಲ್. ಹೀರೆಮಠ, ಗುಜರಾತದ ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಎಸ್.ಎಲ್.ಹೀರೆಮಠ, ಆಯುರ್ವೇದ ವೈದ್ಯರು ಡಾ.ವಿ.ಟಿ.ಹೀರೆಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಎನ್. ಅಥಣಿ, ಸಂಘದ ಕಾಲೇಜುಗಳು ಆಡಳಿತ ಮಂಡಳಿ ಕಾರ್ಯಧ್ಯಕ್ಷ ಗುರುಬಸವ ಸೂಳಿಭಾವಿ, ವೈದ್ಯಕೀಯ ಕಾಲೇಜುಗಳ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಉಪಸ್ಥಿತರಿದ್ದರು.