ಸ್ವಾತಂತ್ರ‍್ಯದ ಕಿಚ್ಚು ಹಚ್ಚಿದ ಮಹಿಳೆ ಚೆನ್ನಮ್ಮ

bkt-10-4
ಬಾಗಲಕೋಟೆ ತಾಲೂಕಿನ ಬೋಡನಾಯಕದಿನ್ನಿ ಗ್ರಾಮದಲ್ಲಿ ಚೆನ್ನಮ್ಮಾ ಹಾಗೂ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿದರು
Published on

ಬಾಗಲಕೋಟೆ: ದೇಶದಲ್ಲಿ ಸ್ವಾತಂತ್ರ‍್ಯದ ಕಿಚ್ಚು ಹಚ್ಚಿದ ಪ್ರಥಮ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ, ನಂಬಿಕೆ ವಿಶ್ವಾಸಕ್ಕೆ ಮೊತ್ತೊಂದು ಹೆಸರೆ ಸಂಗೊಳ್ಳಿ ರಾಯಣ್ಣ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ತಾಲೂಕಿನ ಬೋಡನಾಯಕನದಿನ್ನಿ ಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ವೀರರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪರೂಪದ ಕಾರ್ಯಕ್ರಮವಾಗಿದ್ದು, ವೀರರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ನಡುವೆ ತಾಯಿ ಪುತ್ರ ಸಂಬಂಧವಾಗಿತ್ತು, ರಾಯಣ್ಣನ ಮೆಲೆ ಅಪಾರ ವಿಶ್ವಾಸವನ್ನು ರಾಣಿ ಚೆನ್ನಮ್ಮ ಹೊಂದಿದ್ದಳು. ಅಷ್ಟೆ ನಿಷ್ಟನಾಗಿ ರಾಯಣ್ಣ ಕೂಡ ಇದ್ದರು, ನಂಬಿಕೆ ವಿಶ್ವಾಸಕ್ಕೆ ಅವರು ಮಾದರಿಯಾಗಿದ್ದರು, ಇಂದಿನ ಯವ ಜನಾಂಗಕ್ಕೆ ಅವರು ಪ್ರೇರಣಾದಾಯಕರು, ಕಿತ್ತೂರು ಸಣ್ಣ ಸಂಸ್ಥಾನವಾದರೂ ಭಾರತದಿಂದ ಬ್ರಿಟಿಷರನ್ನೂ ಹೊರಹಾಕುವ ಮಹಾನ ಸಂಕಲ್ಪ ಚೆನ್ನಮ್ಮಳದಾಗಿತ್ತು ಎಂದರು.

ಸ್ವಾತಂತ್ರ‍್ಯ ಕಿಚ್ಚು ಹಚ್ಚಿದ ಪ್ರಥಮ ಮಹಿಳೆ ಚನ್ನಮ್ಮ ಆಗಿದ್ದಾಳೆ, ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಮುಂಬಯಿ ಕರ್ನಾಟಕ ಪ್ರಾಂತವನ್ನು ಕಿತ್ತೂರು ಕರ್ನಾಟಕ, ಹೈದ್ರಾಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು ಇತಿಹಾಸ, ರಾಣಿ ಚೆನ್ನಮ್ಮ ಹಾಗೂ ರಾಯಣ್ಣನಿಂದ ನಂಬಿಕೆ,ವಿಶ್ವಾಸ,ದೇಶಪ್ರೇಮವನ್ನು ಇಂದಿನ ಯುವಕರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ರೇವಣಸಿದ್ದಯ್ಯ ಹಿರೇಮಠ,ಮುಪ್ಪಯ್ಯ ಹಿರೇಮಠ, ಜಿ.ಎಂ.ವಾಲಿಕಾರ, ಶಂಕ್ರಪ್ಪ ಹೊಸಮನಿ, ಸಿದ್ದಪ್ಪ ಗಡೆದ, ಸುರೇಶ ಕೊಣ್ಣೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಶಿವರಾಜ ವಾಡ್ಕರ, ಮುದಕಣ್ಣ ಕೊಲಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net