ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡಿ

13 hkr 01
Published on

ಹಿರೇಕೆರೂರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬುತ್ತಿದೆ. ಪ್ರತಿಯೊಬ್ಬ ಭಾರತೀಯರಿಗೆ ಇದು ಅತ್ಯಂತ ಮಹತ್ವದ ದಿನ. ಎಲ್ಲರೂ ಸ್ವಯಂಪ್ರೇರಣೆಯಿಂದ ಈ ದಿನವನ್ನು ಹೆಮ್ಮೆ, ಗೌರವದಿಂದ ಆಚರಿಸಬೇಕು ಎಂದು ಬಿಜೆಪಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನಿರ್ಮಲಾ ಗುಬ್ಬಿ ಹೇಳಿದರು.

ಅಮೃತ ಮಹೋತ್ಸವದ ನಿಮಿತ್ತ ತಾಲೂಕು ಬಿಜೆಪಿ ಮಹಿಳಾ ಘಟಕ ಶನಿವಾರ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅನೇಕ ಹೋರಾಟಗಾರರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ದೇಶದ ಪ್ರತಿಯೊಬ್ಬರೂ 75ನೇ ಸ್ವಾತಂತ್ರ್ಯೊತ್ಸವ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡೋಣ ಎಂದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಿಂದ ಸರ್ವಜ್ಞ ವೃತ್ತದವರೆಗೆ ಪಾದಯಾತ್ರೆ ನಡೆಯಿತು. ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಿತ್ರಾ ಪಾಟೀಲ, ಪಪಂ ಅಧ್ಯಕ್ಷ ಕಂಠಾಧರ ಅಂಗಡಿ, ವೀರಣ್ಣ ಚಿಟ್ಟೂರ, ಗೀತಾ ದಂಡಗೀಹಳ್ಳಿ, ರೂಪಾ ಆಡೂರ, ಮಂಜುಳಾ ಬಾಳಿಕಾಯಿ, ಲತಾ ಬಣಕಾರ, ವೀಣಾ ಬೆಳ್ಳೂಡಿ, ವಿಶಾಲಾಕ್ಷಿ ಹಳಕಟ್ಟಿ, ಪೂರ್ಣಿಮಾ ಕಾರಗಿ, ನೀಲಮ್ಮ ಸಿದ್ದಪ್ಪಗೌಡ್ರ, ಗೌರಿಬಾಯಿ ಲಮಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net