ಸ್ವಾತಂತ್ರ್ಯ ಹಬ್ಬದ ಸಂಭ್ರಮ ದೇಶಭಕ್ತಿ ಬಡಿದೆಬ್ಬಿಸಿದ ಚಿಣ್ಣರು

16 svr 03- FLAG
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸ್ವಾತಂತ್ರ ದಿನಾಚರಣೆಯನ್ನು ಹಬ್ಬದಂತೆ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಡೆ ಸಡಗರ, ಸಂಭ್ರಮದಿAದ ಮಂಗಳವಾರ ಆಚರಿಸಲಾಯಿತು. ಸ್ವಾತಂತ್ರ ದಿನಾಚರಣೆ ಅಂಗವಾಗಿ ಎಲ್ಲಡೆ ಶಾಲೆಗಳಲ್ಲಿ  ಜರುಗಿದ ವಿದ್ಯಾರ್ಥಿಗಳ, ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿನ ದೇಶಭಕ್ತಿಯನ್ನು ಬಡಿದೆಬ್ಬಿಸುವಂತೆ ಮಾಡಿದವು.
ನಗರ ಮತ್ತು ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರÈ ದಿನಾಚರಣೆಯ ನಿಮಿತ್ತವಾಗಿ ಆಯಾ ಸಂಸ್ಥೆಗಳ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು. ಎಲ್ಲಡೆ ಜನ ಗಣ ಮನ  ರಾಷ್ಟçಗೀತೆ ಮೊಳಗಿತು. ಅಲ್ಲದೆ ಹರ್ ಘರ್ ತಿರಂಗಾ ಅಭಿಯಾನವು ಭರ್ಜರಿಯಾಗಿ ಜರುಗಿತು.
ಕಮಲಾಪುರ ಕಾಲೇಜು
ಕಲಬುರಗಿಗೆ ಸಮೀಪದ ಕಮಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾದ ಅಮೃತಾ ಕಟಕೆ ಧ್ವಜಾರೋಹಣ ನೆರವೇರಿಸಿದರು. ಉಪನ್ಯಾಸಕರಾದ ಡಾ.ಅವಿನಾಶ ಕಂಠಿಕಾರ, ಡಾ.ಜಗದೇವಪ್ಪ ಧರಣಿ, ಡಾ.ರವೀಂದ್ರ ಕುಂಬಾರ, ಡಾ.ಶಾಂತಾ ಅಷ್ಟಗಿ, ಡಾ.ಮಹ್ಮದ್ ಯೂನಸ್, ಡಾ.ಶಾಮರಾವ ಸಿದ್ಧೆ, ಡಾ.ನಿವೇದಿತಾ ಸ್ವಾಮಿ, ಡಾ.ಸವಿತಾ ಪಾಟೀಲ್, ಪ್ರೊ.ಗೌಸಿಯಾಬೇಗಂ ಇತರರಿದ್ದರು.
ಮಾರ್ಗದರ್ಶಿ ಟ್ರಸ್ಟ್
ಕಲಬುರಗಿ ನಗರದ ರಾಣೇಶ್ ಪೀರ್ ದರ್ಗಾ ಬಳಿಯುರುವ ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್ನ ಹಿರಿಯ ಮನೆಯಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಲಿಂಗ ಹಳಿಮನಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಮಹಾಸಂಘ ಅಧ್ಯಕ್ಷ ರವಿ ದೇಗಾಂವ, ಸಂದೀಪ ಭರಣಿ, ಸಂಸ್ಥೆಯ ನಿರ್ದೇಶಕ ಆನಂದರಾಜ, ಅಶ್ವಿನಿ, ರೇಣುಕಾ, ಶಿವಕುಮಾರ ಹೋಳಕರ್, ಭೀಮರಾ, ಸುಂದರ ಹಲಗಿ ಮೊದಲಾದವರಿದ್ದರು.
==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net