ಸ್ವರ್ಣ ಗೌರಮ್ಮ ದೇವಿ ಮೃತ್ತಿಕೆ ಸಂಗ್ರಹ

IMG-20250811-WA0164
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿಯಿಂದ ಗಣಪತಿ ಹಾಗೂ ಅಮ್ಮ ಸ್ವರ್ಣ ಗೌರಮ್ಮ ದೇವಿಯನ್ನು ದರ್ಬಾರಿನಲ್ಲಿ ಮೆರೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಮಾಡಾಳು ಮೂಲಸ್ಥಾನ ಸ್ವರ್ಣ ಗೌರಮ್ಮನವರ 166ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆತಿದೆ. ಸಂಪ್ರದಾಯದಂತೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಗುರುಗಳು ದೇವಿಯ ಮೂರ್ತಿಯನ್ನು ಸಿದ್ಧಪಡಿಸುವ ಮೃತ್ತಿಕೆಗೆ ಪೂಜೆ ಸಲ್ಲಿಸುವ ವಾಡಿಕೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಮೂಲ ಸನ್ನಿಧಿಯಲ್ಲಿ ಕೋಡಿ ಮಠದ ಉತ್ತರಾಧಿಕಾರಿಗಳಾದ ಶ್ರೀ ಚೇತನ್ ಮರಿದೇವರ ಸಾನ್ನಿಧ್ಯದಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು.

ಶ್ರೀಗಳು ಪಾದಯಾತ್ರೆಯಲ್ಲಿ ಗ್ರಾಮದ ಹೊರ ಭಾಗದಲ್ಲಿರುವ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಇರುವ ತೆಂಗಿನ ತೋಟದ ಮಧ್ಯೆ ಇರುವ ಜಾಗದಲ್ಲಿ ಅಮ್ಮನವರ ಮೂರ್ತಿ ತಯಾರಿಕೆಗೆ ಬೇಕಾಗುವ ಮೃತ್ತಿಕೆಯನ್ನು ಎರಡು ಬಿದಿರು ಕುಕ್ಕೆಯಲ್ಲಿ ಸಂಗ್ರಹಿಸಿ ಪುನಃ ಮೂಲ ಸನ್ನಿಧಿಗೆ ಹೊತ್ತು ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net