

ತೇರದಾಳ: ರಾಷ್ಟಿçÃಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಸ್ವಯಂ ಸೇವಕರು ಶಿಸ್ತುಬದ್ಧ ಪಥ ಸಂಚಲನ ನಡೆಸಿದರು. ಸಾವಿರಕ್ಕೂ ಹೆಚ್ಚು ಗಣವೇಷದಾರಿಗಳು ಭಾಗವಹಿಸಿ ಹೆಜ್ಜೆ ಹಾಕಿದರು.
ಎಸ್.ಪಿ ಹೈಸ್ಕೂಲ್ ದಿಂದ ಪ್ರಾರಂಭವಾಗಿ ಗಂಗಾಧರ ಮಠ, ಕಾಮನಕಟ್ಟಿ, ಎಸ್‌ಬಿಐ ಬ್ಯಾಂಕ್, ಪ್ರಭುದೇವರ ಅಗಸಿ, ಪ್ರಭುದೇವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಮೋಪಗಾರ ಗಲ್ಲಿ, ಹುಬ್ಬಳ್ಳಿ ಆಸ್ಪತ್ರೆ, ಗುಮ್ಮಟಗಲ್ಲಿಯ ಹನುಮಾನ ಮೂರ್ತಿ, ಭೋವಿ ಗಲ್ಲಿ, ಅಂಬೇಡ್ಕರ್ ವೃತ್ತ, ಬಿರಡಿ ಗಲ್ಲಿ, ಕಾಳಿನ ಬಜಾರ, ರೇಣುಕಾದೇವಿ ದೇವಸ್ಥಾನ, ಸಮಗಾರ ಗಲ್ಲಿ, ಮಹಾವೀರ ವೃತ್ತ, ಬಸ್ ನಿಲ್ದಾಣ, ದತ್ತ ಗುಡಿ, ಹಳೆ ಪೊಲೀಸ್ ಠಾಣೆ, ಚಾವಡಿ ಗಲ್ಲಿ, ಜವಳಿ ಬಜಾರ ಮೂಲಕ ಸಿದ್ದೇಶ್ವರ ದೇವಸ್ಥಾನದವರೆಗೆ ತಲುಪಿ ಸಮಾಪ್ತಿಗೊಂಡಿತು.
ನಾಲ್ಕು ಘೋಷ ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ವೀಕ್ಷಣೆ ಮಾಡಿದರು. ಪಥ ಸಂಚಲನ ಉದ್ದಕ್ಕೂ ಜಯ, ಘೋಷಗಳು ಮೊಳಗಿದವು. ಪಟ್ಟಣದಲ್ಲಿ ಪ್ರಮುಖ ಬೀದಿ, ವೃತ್ತ, ಸ್ಥಳಗಳಲ್ಲಿ ಕೇಸರಿ ಭಾವು ರಾರಾಜಿಸಿತು. ಚಿಕ್ಕ ಮಕ್ಕಳು ಛದ್ಮವೇಷ ಧರಿಸಿ ಗಮನ ಸೆಳೆದರು. ಸಂಚಲನದ ಮಾರ್ಗಗಳು ವಿಶೇಷವಾಗಿ ಕಟೌಟ, ಬಲೂನ್‌ಗಳಿಂದ ಶೃಂಗರಗೊAಡಿದ್ದವು. ತಳಿರು ತೋರಣ, ರಂಗೋಲಿ ಚಿತ್ತಾರಗಳಿಂದ ಪಟ್ಟಣವು ಕಂಗೂಳಿಸಿತು. ಶಾಸಕ ಸಿದ್ದು ಸವದಿ ಸೇರಿದಂತೆ ಅನೇಕ ಗಣ್ಯರು ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.
ಪಥಸಂಚಲನದಲ್ಲಿ ಡಿವೈಎಸ್‌ಪಿ ರೋಶನ್ ನೇತೃತ್ವದಲ್ಲಿ ಸಿಪಿಐ ಸಂಜಯ ಬಳಗಾರ, ಇಬ್ಬರು ಪಿಎಸ್‌ಐ, ಎಎಸ್‌ಐ, ೧೦೦ ಜನ ಪೊಲೀಸರು, ೧೦೦ ಜನ ಗೃಹ ರಕ್ಷಕ ಧಳ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.