ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು

bkt-2-4
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಾಮಧೇನು ಸಂಸ್ಥೆಯಿAದ ಸ್ವಚ್ಛತೆ ಕೈಗೊಳ್ಳಲಾಯಿತು.
Published on

ಬಾಗಲಕೋಟೆ: ಮಹಾತ್ಮ ಗಾಂಧಿ ಅವರು, ಈ ದೇಶ ಕಂಡ ಮಹಾನ್ ನಾಯಕರು. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಪ್ರತಿಯೊಬ್ಬರೂ ಅಭಿವೃದ್ಧಿ ಕಾರ್ಯಗಳಲ್ಲಿ ಸಹಭಾಗಿತ್ವ ವಹಿಸಬೇಕು. ಸುಂದರ ಸಮಾಜ ನಿರ್ಮಾಣದ ಮೊದಲು ಸ್ವಸ್ತö್ಯ ಸಮಾಜ ರೂಪುಗೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ವಾತಾವರಣ ಸ್ವಚ್ಛವಾಗಿಡಲು ಮುಂದಾಗಬೇಕು ಎಂದು ಯುವ ಮುಖಂಡ, ಚರಂತಿಮಠ ಮತ್ತು ವಸ್ತçದ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಾಮಧೇನು ಸಂಸ್ಥೆಯಿದ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಆವರಣ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಚ್ಛತೆ ಎಂಬುದು ಕೇವಲ ನಗರಸಭೆ, ಗ್ರಾಮ ಪಂಚಾಯಿತಿಗಳ ಪೌರ ಕಾರ್ಮಿಕರ ಕರ್ತವ್ಯವಲ್ಲ. ನಮ್ಮ ಸುತ್ತಲಿನ ವಾತಾವರಣ ಸ್ವಚ್ಛವಾಗಿದ್ದರೆ ಮಾತ್ರ, ಆರೋಗ್ಯವಂತ ಸಮಾಜ ಸಾಧ್ಯವಿದೆ. ಹೀಗಾಗಿ ಸಾಧ್ಯವಾದಷ್ಟೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಮಧೇನು ಸಂಸ್ಥೆಯ ಮುಖಂಡ ಶಿವು ಮೇಲ್ನಾಡ ಮಾತನಾಡಿ, ಸ್ವಚ್ಚತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಡಲು ಕಾಳಜಿ ವಹಿಸುತ್ತೇವೆಯೋ ಹಾಗೆಯೇ, ಸುತ್ತಲಿನ ವಾತಾವರಣ ಹಾಗೂ ಸಮಾಜದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಶಸ್ತç ಚಿಕಿತ್ಸಾಧಿಕಾರಿ ಡಾ.ಪ್ರಕಾಶ ಬಿರಾದಾರ, ಡಾ.ವಿಜಯಕುಮಾರ, ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ಕಾರ್ಯದರ್ಶಿ ವಿಜಯ ಸುಲಾಖೆ, ವಿರುಪಾಕ್ಷಿ ಅಮೃತಕರ, ಸಂಜೀವ ಡಿಗ್ಗಿ, ಗುರು ಅನಗವಾಡಿ, ಅರುಣ ಲೋಕಾಪುರ, ಬಸವರಾಜ ಪಾತ್ರೋಟಿ, ಶಂಕರ ಮಗಜಿ, ರಾಜು ಮೂಲಿಮನಿ, ಯಲ್ಲಪ್ಪ ಜಾಲಗಾರ, ವಿನಾಯಕ ಹಾಸಲಕರ, ಆಂಜನೇಯ ಕಾಗಿ, ನಾಗರಾಜ ದಳವಾಯಿ, ಸುನೀಲ ಲಮಾಣಿ, ಪಾಂಡು ಜಾಧವ, ವಿಷ್ಣು ಮಗಜಿ, ಬೋಮ್ಮಣ್ಣ ಮಮದಾಪುರ, ಮಂಜು ಚೌವ್ಹಾಣ, ಈರಣ್ಣ ಮಮದಾಪೂರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net