ಸ್ವಚ್ಛತೆ ಜೀವನ ಸುಧಾರಣೆಯ ಮೂಲಮಂತ್ರ

HUN-OCT-16-2(HALEBEEDU GP PROGRAMME)
Published on

ಹುಣಸೂರು: ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವುದು ಜೀವನ ಸುಧಾರಣೆಯ ಮೂಲಮಂತ್ರವಾಗಿದೆ ಎಂದು ಹಳೇಬೀಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಹಳೇಬೀಡು ಗ್ರಾಪಂನಲ್ಲಿ ಐಟಿಸಿಎಂಎಸ್ಕೆ-ಔಟ್‌ರೀಚ್ ಸಂಸ್ಥೆಯ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಊಟಕ್ಕೆ ಮೊದಲು, ಶೌಚಗೃಹ ಬಳಸಿದ ನಂತರ ಸೋಪಿನಿಂದ ಕೈತೊಳೆಯುವ ಅಭ್ಯಾಸವನ್ನು ಗ್ರಾಮೀಣರು ಮತ್ತು ವಿಶೇಷವಾಗಿ ಶಾಲಾ ಮತ್ತು ಅಂಗನವಾಡಿ ಮಕ್ಕಳಲ್ಲಿ ಮೂಡಿಸುವುದರಿಂದ ಸಮಾಜಕ್ಕೆ ಆರೋಗ್ಯ ಪೂರ್ಣ ಮಕ್ಕಳನ್ನು ನೀಡಿದಂತಾಗಲಿದೆ. ಸ್ವಚ್ಛತೆ ಎನ್ನುವುದು ಕೇವಲ ಸ್ವಚ್ಛತೆಯಲ್ಲ, ಅದೊಂದು ಜೀವನ ಸುಧಾರಣೆಯ ಸಂಕೇತ, ದೇಶಕ್ಕೆ ಸದೃಢ ಪ್ರಜೆಗಳನ್ನು ನೀಡುವ ಕಾಯಕವಾಗಿದೆ ಎನ್ನುವುದನ್ನು ಅರಿಯೋಣ ಎಂದರು.

ಐಟಿಸಿಎಂಎಸ್ಕೆ-ಔಟ್‌ರೀಚ್ ಸಂಸ್ಥೆಯ ತರಬೇತುದಾರ ಜಿ.ಎಸ್.ಜಗದೀಶ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಗ್ರಾಮೀಣರಲ್ಲಿ ಅರಿವುಮೂಡಿಸುವ ಸತತ ಪ್ರಯತ್ನಗಳನ್ನು ನಡೆಸಬೇಕಿದೆ ಎಂದರು.

ಇದೇ ವೇಳೆ ಗ್ರಾಪಂ ಸಿಬ್ಬಂದಿ ಪ್ರಾತ್ಯಕ್ಷಿಕೆಯ ಮೂಲಕ ಕೈತೊಳೆಯುವ ವಿಧಾನ ಮತ್ತು ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಗ್ರಾಪಂ ಕಾರ್ಯದರ್ಶಿ ಸೇಲಿನ್ ಡಿಸೋಜಾ, ಸಿಬ್ಬಂದಿ ಮಮತಾ, ಅನಿತಾ, ಭಕ್ತೀಶ, ಚಂದ್ರೇಗೌಡ, ನೀರುಗಂಟಿ ಗೋವಿಂದೇಗೌಡ, ರಘು, ಪುಟ್ಟರಾಜನಾಯಕ, ಕೃಷ್ಣೇಗೌಡ, ಸುರೇಶ, ಸ್ವಾಮೀಗೌಡ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net