ಸ್ವಚ್ಛತಾ ಪಖ್ವಾಡ್ ಆಂದೋಲನಕ್ಕೆ ಚಾಲನೆ

03Kush01
Published on

ಕುಶಾಲನಗರ: ಸಮೀಪದ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಪಖ್ವಾಡ್ ಆಂದೋಲನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ, ಶಾಲಾ ಶಿಕ್ಷಣ ಇಲಾಖೆ ನೆರವಿನೊಂದಿಗೆ ಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ಆಯೋಜಿಸಲಾಗಿತ್ತು.


ಆಂದೋಲನದ ಅಂಗವಾಗಿ ಸ್ವಚ್ಛತಾ ಶಪಥ ದಿನ ಹಾಗೂ ಸ್ವಚ್ಛತಾ ಜಾಗೃತಿ ದಿನ ಆಚರಿಸುವ ಮೂಲಕ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಸ್ವಚ್ಛ ಶಾಲೆ-ಸ್ವಚ್ಛ ಪರಿಸರ ನಮ್ಮ ಗುರಿ’ ಎಂದು ವಿದ್ಯಾರ್ಥಿಗಳು ಸಂಕಲ್ಪ ಮಾಡಿದ
ಮಕ್ಕಳಿಗೆ ಸ್ವಚ್ಛತಾ ಪಖ್ವಾಡದ ಮಹತ್ವ ಹಾಗೂ ಸ್ವಚ್ಛತೆಯ ಅರಿವು ಕುರಿತ ಸಂದೇಶ ನೀಡಿದ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮ್‌ಕುಮಾರ್, ಸೆ.1ರಿಂದ ಸೆ.15ರವರೆಗೆ ಎರಡು ವಾರಗಳ ಕಾಲ ಶಾಲಾ ಹಂತದಲ್ಲಿ ನಡೆಯುವ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬ ಮಗು ವೈಯಕ್ತಿಕವಾಗಿ ಶಾಲೆ, ಸಮುದಾಯ ಹಾಗೂ ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರೇರೇಪಿಸಲಾಗುತ್ತಿದೆ ಎಂದರು.

ಶಾಲೆಯ ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯಾ, ಮಕ್ಕಳಿಗೆ ಪರಿಸರ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್ ಮಾತನಾಡಿದರು.

ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಎನ್.ಸುಜಾತಾ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ವಿದ್ಯಾರ್ಥಿ ನಾಯಕಿ ಐಶ್ವರ್ಯಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net