

ಕಲಬುರಗಿ: ಗ್ರಾಮಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳಿದ್ದು, ಪ್ರತಿಯೊಬ್ಬರು ಗ್ರಾಮಕ್ಕೆ ಬರುವ ಸ್ವಚ್ಛ ವಾಹಿನಿಗೆ ತಮ್ಮ ಮನೆಯ ಕಸ ನೀಡಿದರೆ ಗ್ರಾಮ ಸ್ವಚ್ಛತೆಯಿಂದ ಇರಲು ಸಾಧ್ಯ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರಸಿಂಗ್ ಮೀನಾ ಸಲಹೆ ನೀಡಿದರು.
ಕಲಬುರಗಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಗ್ರಾಮೀಣಾಭೀವೃದ್ಧಿ ಪಂಚಾಯತ್‌ರಾಜ್ ಇಲಾಖೆ, ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ಮೈಸೂರು, ಸಂಜೀವಿನಿ ಎನ್‌ಆರ್‌ಎಲ್‌ಎಂ, ಸ್ವಚ್ಛಭಾರತ ಮಿಷನ್, ಅರ್ಬನ್ ಮ್ಯಾನೇಜ್‌ಮೆಂಟ್ ಸೆಂಟರ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ಪ್ರದೇಶದಲ್ಲಿನ ಸ್ವಚ್ಛತಾಗಾರರ ಸುರಕ್ಷತೆ ಮತ್ತು ಘನತೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಗ್ರಾಮಗಳು ಸಂಪೂರ್ಣ ಸ್ವಚ್ಛವಾಗಿರಬೇಕಾದರೆ ಹಳೆಯ ನಡವಳಿಕೆಯಲ್ಲಿ ಬದಲಾವಣೆಯಾಗಬೇಕು. ಆಗ ಮಾತ್ರ ಗ್ರಾಮಗಳೂ ಸಂಪೂರ್ಣ ಸ್ವಚ್ಛತೆ ಕಾಣಲು ಸಾಧ್ಯ. ಬಯಲು ಶೌಚಾಲಯಕ್ಕೆ ಹೋಗದೆ ಮನೆಯಲ್ಲಿ ಶೌಚಗೃಹ ನಿರ್ಮಿಸಿ ಬಳಕೆ ಮಾಡಿದ್ರೆ ಕುಟುಂಬವಲ್ಲದೆ, ಗ್ರಾಮದ ಪರಿಸರವು ಆರೋಗ್ಯವಂತವಾಗಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ವಿಡಿಯೋ ವರ್ಚುವಲ್ ಮೂಲಕ ಮಾತನಾಡಿದರು. ಯುನಿಸೆಫ್-ವಾಷ್ ಕರ್ನಾಟಕ, ತೆಲಂಗಾಣ ಮುಖ್ಯಸ್ಥ ಪ್ರಭಾತ್ ಮಟ್‌ಪಾಡಿ ತರಬೇತಿಯ ರೂಪು-ರೇಷೆ, ಉದ್ದೇಶ ಕುರಿತು ಮಾತನಾಡಿದರು.
ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಮೈಸೂರು ಬೋಧಕ ಎಸ್.ಎಚ್.ಪ್ರಕಾಶ, ಪ್ರಾದೇಶಿಕ ಕಚೇರಿಯ ಬೋಧಕ ಶಿವಪುತ್ರ ಹಾಗೂ ಡಾ.ರಾಜು ಕಂಬಳಿಮಠ ಮಾತನಾಡಿದರು. ಯುನಿಸೆಫ್ ಸಂಯೋಜಕ ಡಾ.ದಿಲೀಪ್ ನಿರೂಪಿಸಿದರು.
ಸಮಾಲೋಚಕರಾದ ಗಿರೀಶಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಗೋವಿಂದರಾಜಲು ಸ್ವಾಗತಿಸಿದರು. ಚಂದ್ರಕಾAತ ಹಿರೇಮಠ್ ವಂದಿಸಿದರು.