

ಕಾರವಾರ: ಕೇಂದ್ರ ಸರ್ಕಾರ ಕೈಗೊಂಡ ಸ್ವಚ್ಛ ಭಾರತ ಸರ್ವೆಕ್ಷಣೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿವೆ.
ಜಾಲಿ ಪಟ್ಟಣ ಪಂಚಾಯಿತಿ 25 ಸಾವಿರದೊಳಗಿನ ಜನಸಂಖ್ಯೆ ಇರುವ ಪಟ್ಟಣಗಳ ವ್ಯಾಪ್ತಿಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದಿದ್ದು, ದಕ್ಷಿಣ ವಲಯಕ್ಕೆ 7 ನೇ ಸ್ಥಾನ ಪಡೆದಿದೆ. ಅಲ್ಲದೆ, ದಕ್ಷಿಣ ವಲಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಗುರಿತಿಸಲಾಗಿದೆ.ಜಾಲಿ ದಕ್ಷಿಣ ಭಾರತ ಮಟ್ಟದಲ್ಲಿ 2018 ರಲ್ಲಿ 905 ಹಾಗೂ 2019 ರಲ್ಲಿ 840 ನೇ ಸ್ಥಾನ ಪಡೆದಿದೆ.
ಹಳಿಯಾಳ ಪುರಸಭೆ ರಾಜ್ಯದಲ್ಲಿ 12, ದಕ್ಷಿಣ ಭಾರತಕ್ಕೆ 23, ಅಂಕೋಲಾ ರಾಜ್ಯಕ್ಕೆ 13, ದಕ್ಷಿಣ ಭಾರತಕ್ಕೆ 53, ಯಲ್ಲಾಪುರ ರಾಜ್ಯಕ್ಕೆ 21, ದಕ್ಷಿಣ ಭಾರತಕ್ಕೆ 69, ಸಿದ್ದಾಪುರ ರಾಜ್ಯಕ್ಕೆ 30, ದಕ್ಷಿಣ ಭಾರತಕ್ಕೆ 91, ಮುಂಡಗೋಡ ರಾಜ್ಯದಲ್ಲಿ 37, ದ.ಭಾರತಕ್ಕೆ 127, ಕುಮಟಾ ರಾಜ್ಯದಲ್ಲಿ 13, ದ.ಭಾರತ ಮಟ್ಟದಲ್ಲಿ 50, ಹೊನ್ನಾವರ ರಾಜ್ಯಕ್ಕೆ 55, ದ.ಭಾರತಕ್ಕೆ 271, ಭಟ್ಕಳ ರಾಜ್ಯಕ್ಕೆ 15, ದ.ಭಾರತಕ್ಕೆ 52, ಕಾರವಾರ ನಗರಸಭೆಯೂ ತನ್ನ ಸ್ಥಾನದಲ್ಲಿ ಚೇತರಿಕೆ ಕಂಡಿದೆ. ರಾಜ್ಯದಲ್ಲಿ 11 ನೇ ಸ್ಥಾನ ಪಡೆದಿದ್ದು, ದ.ಭಾರತ ವಲಯಕ್ಕೆ 57 ನೇ ಸ್ಥಾನ ಪಡೆದಿದೆ. ದಕ್ಷಿಣ ಭಾರತ ವಲಯದಲ್ಲಿ 2018 ರಲ್ಲಿ 438, 2019 ರಲ್ಲಿ 890 ನೇ ಸ್ಥಾನ ಪಡರದಿತ್ತು.ದಾಂಡೇಲಿ ಈ ಬಾರಿ ರಾಜ್ಯಕ್ಕೆ 28 ದ.ವಲಯಕ್ಕೆ ,145 ನೇ ಸ್ಥಾನ ಗಳಿಸಿದ್ದು, 2018 ರಲ್ಲಿ 727, 2019 ರಲ್ಲಿ 1095 ನೇ ಸ್ಥಾನ ಪಡೆದಿತ್ತು. ಶಿರಸಿ ನಗರಸಭೆ ರಾಜ್ಯಕ್ಕೆ 3 ಹಾಗೂ ದಕ್ಷಿಣ ಭಾರತ ವಲಯಕ್ಕೆ 23 ನೇ ಸ್ಥಾನ ಪಡೆದಿದೆ. 2018 ರಲ್ಲಿ ಶಿರಸಿ ದಕ್ಷಿಣ ಭಾರತ ಮಟ್ಟದಲ್ಲಿ 121, 2019 ರಲ್ಲಿ 82 ನೇ ಸ್ಥಾನ ಪಡೆದಿತ್ತು. ಈ ಬಾರಿ ಮತ್ತಷ್ಟು ಸಾಧನೆ ಮಾಡಿದೆ.