ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯ

bkt-19-6
ಬಾಗಲಕೋಟೆ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ೧ ಮತ್ತು ೨ ಗುರುವಾರ ಆಯೋಜಿಸಿದ್ದ ಡೆಂಗಿ ರೋಗ : ಜಾಗೃತಿ ಕಾರ್ಯಕ್ರಮದಲ್ಲಿ ಆರ್.ಪಿ.ಜಡಗನ್ನವರ ಮಾತನಾಡಿದರು. ಪ್ರಾಚಾರ್ಯ ಶ್ರೀನಿವಾಸ ನರಗುಂದ, ಎಸ್.ಎಂ. ಹಡಪದ, ಎಸ್.ವೈ.ಬೊಮ್ಮಣ್ಣವರ ಇದ್ದರು.
Published on

ಬಾಗಲಕೋಟೆ: ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಪೋಷಕಾಂಶವುಳ್ಳ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಆರೋಗ್ಯ ಶಿಕ್ಷಣಾಽಕಾರಿ ಆರ್.ಪಿ.ಜಡಗನ್ನವರ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ೧ ಮತ್ತು ೨ ಗುರುವಾರ ಆಯೋಜಿಸಿದ್ದ ಡೆಂಗಿ ರೋಗ : ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡೆಂಗಿ ಜ್ವರಕ್ಕೆ ಮೂಲ ಕಾರಣವಾಗುವ ಸೊಳ್ಳೆಗಳನ್ನು ನಿಯಂತ್ರಣ ಮಾಡುವುದು ಎಲ್ಲರ ಜವಾಬ್ದಾರಿ. ಸ್ವಚ್ಛ ಪರಿಸರ ಹಾಗೂ ಉತ್ತಮ ನೀರು ನಿರ್ವಹಣೆಯ ಬಗೆಗೆ ಜನರಲ್ಲಿ ಅರಿವನ್ನು ಮೂಡಿಸಬೇಕು. ಸೊಳ್ಳೆ ಚಿಕ್ಕದಿದ್ದರೂ ಅಪಾಯ ದೊಡ್ಡದು ಎಂಬುದನ್ನು ಮನವರಿಕೆ ಮಾಡಿಕೊಟ್ಟು ಅವರಲ್ಲಿ ಜಾಗೃತಿಯನ್ನುಂಟು ಮಾಡಬೇಕು ಎಂದರು.

ಉಳಿದ ವಸ್ತುಗಳಂತೆ ಮಾರುಕಟ್ಟೆಯಲ್ಲಿ ಆರೋಗ್ಯವನ್ನು ಖರೀದಿಸಲಾಗದು. ಡೆಂಗಿಯAತಹ ಮಾರಕ ರೋಗಗಳ ಬಗ್ಗೆ ಉದಾಸೀನ ಮಾಡದೇ,ಸರಿಯಾದ ಸಮಯಕ್ಕೆ ವೈದ್ಯಕೀಯ ಉಪಚಾರವನ್ನು ಪಡೆದುಕೊಳ್ಳುವುದರ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಉತ್ತಮ ಆರೋಗ್ಯ ಬೇಕು. ಉತ್ತಮ ಹವ್ಯಾಸ ಮತ್ತು ಒಳ್ಳೆಯ ಆಹಾರ ಪದ್ಧತಿಯಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು.

ಬದಲಾಗುತ್ತಿರುವ ಜೀವನ ಶೈಲಿಯಿಂದ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿರುವ ಯುವಜನತೆ ಜಾಗೃತರಾಗಬೇಕು. ಡೆಂಗಿಯAತಹ ರೋಗಗಳ ಬಗ್ಗೆ ತಮ್ಮ ಪರಿಸರದಲ್ಲಿ ಅರಿವು ಮೂಡಿಸಬೇಕು. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು. ಈ ದಿಶೆಯಲ್ಲಿ ಮಹಾವಿದ್ಯಾಲಯ ಆಯೋಜಿಸುತ್ತಿರುವ ಇಂತಹ ಜಾಗೃತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಉಪನ್ಯಾಸಕರಾದ ನಮಿತಾ ನಾಯಕ, ಮೈತ್ರಾ ಗುಡೂರ ಇದ್ದರು. ಸುಮಾ ವಡ್ಡರ ಮತ್ತು ಸಹನಾ ನರೇಗಲ್ ಪ್ರಾರ್ಥಿಸಿದರು. ಎನ್.ಎಸ್.ಎಸ್. ಅಽಕಾರಿ ಎಸ್.ಎಂ. ಹಡಪದ ಸ್ವಾಗತಿಸಿದರು. ಜ್ಯೋತಿ ಬಿಳಿಜಾಡರ ನಿರೂಪಿಸಿದರು. ಎನ್.ಎಸ್.ಎಸ್. ಅಽಕಾರಿ ಎಸ್.ವೈ.ಬೊಮ್ಮಣ್ಣವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net