ಸ್ಪಿನ್ ಕೇಂದ್ರದ ಯೋಗಪಟುಗಳಿಗೆ ಪ್ರಶಸ್ತಿ

04 KRN-2
Published on

ಕೆ.ಆರ್.ನಗರ: ಪ್ರತಿದಿನ ತಪ್ಪದೆ ಯೋಗಾಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗಪಟು ಡಿ.ರುಕ್ಮಿಣಿ ಹೇಳಿದರು.

ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಪಟ್ಟಣದ ಸ್ಪಿನ್ ಯೋಗ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ನಮ್ಮ ದೈನಂದಿನ ಚಟುವಟಿಕೆಗಳನ್ನು ಉತ್ಸಾಹದಿಂದ ಮಾಡಬಹುದು. ದೈಹಿಕ, ಮಾನಸಿಕವಾಗಿ ಆರೋಗ್ಯದಿಂದ ಇರಬಹುದು ಎಂದು ತಿಳಿಸಿದರು.

ಈ ಬಾರಿ ಶ್ರೀ ಬಸವ ಯೋಗ ಪ್ರತಿಷ್ಠಾನ ನಂಜನಗೂಡು, ಮೈಸೂರು ಶಂಕರಪುರ ಪೈಲ್ವಾನ್ ಯಜಮಾನ ಬಸವರಾಜು ಅವರ ಸ್ಮರಣಾರ್ಥ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಸ್ಪಿನ್ ಯೋಗ ಕೇಂದ್ರದ ಪಟುಗಳು ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಡಿ.ರುಕ್ಮಿಣಿ ದ್ವಿತೀಯ ಸ್ಥಾನ, ಕೃಷ್ಣ, ಅಶ್ವಿನಿ, ಇ.ಡಿ.ಅನಿತಾ ಐದನೇ ಸ್ಥಾನ ಪಡೆದಿದ್ದಾರೆ. ವಿಜೇತರನ್ನು ಸುರೇಶ್ ಚೌಹಾಣ್, ಐಶ್ವರ್ಯಾ, ಲಿಖಿತ್ ಸುಬ್ರಹ್ಮಣ್ಯ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net