

ಕೊಕ್ಕರ್ಣೆ
ಹತ್ತು ಹಲವು ಸೇವಾ ಚಟುವಟಿಕೆಗಳ ಮೂಲಕ ಲಯನ್ಸ್ ಮುನ್ನೆಡೆಯುತ್ತಿದೆ. ಸ್ನೇಹ, ಸೌಹಾರ್ದ ಜತೆಗೆ ಮುಕ್ತ ಹೃದಯದ ಸೇವೆ ಅಗತ್ಯ ಎಂದು ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹೇಳಿದರು.
ಸಿಟಿ ಸೆಂಟರ್ ಚಂದನಾ ಸಭಾಂಗಣದಲ್ಲಿ ಬ್ರಹ್ಮಾವರ ಬಾರ್ಕೂರು ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಲಿಗೆ ಯಂತ್ರ ಹಾಗು ಆರೋಗ್ಯ ಸಮಸ್ಯೆಯಲ್ಲಿರುವವರಿಗೆ ಧನಸಹಾಯ ಹಸ್ತಾಂತರಿಸಲಾಯಿತು. ಪ್ರಥಮ ಪ್ರಯತ್ನದಲ್ಲಿ ಸಿಎಯಲ್ಲಿ ಉತ್ತೀರ್ಣರಾದ ಶಮಾ ಆರ್.ಕುಂದರ್, ಸಮಾಜಮುಖಿಯಾಗಿ ತೊಡಗಿಸಿಕೊಂಡ ಮೆಸ್ಕಾಂ ಲೈನ್‌ಮನ್ ನವೀನ್, ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖೆ ಸೀನಿಯರ್ ಮ್ಯಾನೇಜರ್ ದೀಪಕ್ ಎಂ., ಅಸಿಸ್ಟೆಂಟ್ ಮೆನೇಜರ್ ಶಶಿಕಿರಣ್, ದೀಕ್ಷಾ ಬ್ರಹ್ಮಾವರ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಶೆಟ್ಟಿ, ಚಾಂತಾರು ಪಂಚಾಯಿತಿ ಸದಸ್ಯರಾದ ನಿತ್ಯಾನಂದ ಹಾಗೂ ಕೃಷ್ಣ ಸೇರಿಗಾರ್, ದೇವದಾಸ್ ಶೆಟ್ಟಿ ಬಿಜು ಜಿ.ನಾಯರ್, ಕ್ಲಬ್ ಹಿರಿಯ ಸದಸ್ಯರಾದ ರಾಜೀವ ಆಳ್ವ, ಬಾಲಕೃಷ್ಣ ಹೆಗ್ಡೆ, ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಜಿಲ್ಲೆಯ ಸ್ವಪ್ನಾ ರಾಜೀವ್ ಕೋಟ್ಯಾನ್, ಕ್ಯಾಬಿನೆಟ್ ಕಾರ್ಯದರ್ಶಿ ಗಿರೀಶ್ ರಾವ್, ಕೋಶಾಧಿಕಾರಿ ಶ್ರೀನಿವಾಸ ಪೈ, ಹರಿಪ್ರಸಾದ್ ರೈ, ವಲಯ ಅಧ್ಯಕ್ಷ ಧರ್ಮರಾಜ ಮುದಲಿಯಾರ್, ಕ್ಲಬ್ ಅಧ್ಯಕ್ಷ ಎಸ್.ಜಯರಾಮ್ ನಾಯಕ್, ಕಾರ್ಯದರ್ಶಿ ಐವಾನ್ ದೊನಾತ್ ಸುವಾರಿಸ್, ಕೋಶಾಧಿಕಾರಿ ಯು.ಸಂತೋಷ್ ಕೋಟ್ಯಾನ್, ಲಿಯೋ ಲಕ್ಷ್ಮಿತಾ ಶೆಟ್ಟಿ, ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.