

ಕೆ.ಸಂಜೀವ ಆರ್ಡಿ ಸಿದ್ದಾಪುರ
ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯ ಕಾಸಾಡಿ ಹಾಗೂ ಅಲ್ಬಾಡಿ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ರಾಜ್ಯ ಹೆದ್ದಾರಿ ವಿಸ್ತರಣೆ ಹಾಗೂ ಮರು ಡಾಂಬರುಗೊಳಿಸುವಂತೆ ಈ ಭಾಗದ ಜನರ ಬೇಡಿಕೆ ಈಡೆರಿಕೆಗೆ ಕಾಲ ಕೂಡಿಬಂದಿದೆ.
ಅಲ್ಬಾಡಿ ಭಾಗದಲ್ಲಿ ಕಾಮಗಾರಿ ಬಹುತೇಕ ಮುಗಿದಿದೆ. ಹಾಲಾಡಿ ಸಮೀಪದ ಕಾಸಾಡಿಯಲ್ಲಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಸಹಸ್ರಾರು ವಾಹನ ಸವಾರರಿಗೆ ಅನುಕೂಲವಾಗಲಿದ್ದು, ಅಪಘಾತಗಳಿಗೂ ಕಡಿವಾಣ ಬೀಳಲಿದೆ.
ರಾಜ್ಯ ಹೆದ್ದಾರಿಯ ಕಾಸಾಡಿಯಿಂದ ಹೈಕಾಡಿ ತನಕ 3 ಕಿ.ಮೀ. ರಸ್ತೆ, ಅಲ್ಬಾಡಿಯಲ್ಲಿ 1.6 ಕಿ.ಮೀ. ಸಹಿತ 4.6 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಒಟ್ಟು 10 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿದೆ. ಜತೆಗೆ 5.5 ಮೀ.ನಷ್ಟಿದ್ದ ರಸ್ತೆಯ ಅಗಲವನ್ನು 7 ಮೀ.ಗೆ ವಿಸ್ತರಿಸಲಾಗಿದೆ.
ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯು ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಕಮಲಶಿಲೆ, ಮಂದಾರ್ತಿ, ಮಾರಣಕಟ್ಟೆ ಸಹಿತ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕಿಸುತ್ತದೆ. ಜತೆಗೆ ಕುಂದಾಪುರದಿಂದ ಹೆಬ್ರಿ, ಆಗುಂಬೆ, ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ತೆರಳಲು, ಕಾರ್ಕಳದಿಂದ ಕುಂದಾಪುರ, ಹಾಲಾಡಿ, ಶಂಕರನಾರಾಯಣ, ಸಿದ್ದಾಪುರ, ಕೊಲ್ಲೂರಿಗೆ ತೆರಳಲು ಇದೇ ಮಾರ್ಗದಲ್ಲಿ ಸಂಚರಿಸಬೇಕು.
ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ದಟ್ಟಾಣೆಯಿರುತ್ತದೆ. ಅಲ್ಬಾಡಿ ಸಮೀಪದ 9ನೇ ಮೈಲಿಕಲ್ಲು ಬಳಿಯಿಂದ ಅಲ್ಬಾಡಿ ಸರ್ಕಲ್ ತನಕ ಇಕ್ಕಾಟ್ಟಾದ ರಸ್ತೆಗಳಲ್ಲಿ ಹಲವು ಬಾರಿ ಅಫಾಘಾತಗಳು ಸಂಭವಿಸಿವೆ. ರಸ್ತೆ ವಿಸ್ತರಣೆಯಿಂದ ಅಫಾಘಾತಗಳ ಪ್ರಮಾಣ ಕಡಿಮೆಯಾಗಲಿದ್ದು, ವಾಹನ ಸವಾರಾರಿಗೆ ಅನುಕೂಲವಾಗಲಿದೆ. -ಪ್ರಸಾದ್ ತೊನ್ನಾಸೆ, ಸ್ಥಳೀಯ ನಿವಾಸಿ ಅಲ್ಬಾಡಿಯಲ್ಲಿ ಕಾಮಗಾರಿ ಮುಗಿದಿದೆ. ಹಾಲಾಡಿ ಸಮೀಪದ ಕಾಸಾಡಿಯಲ್ಲಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಸಾರ್ವಜನಿಕರಿಗೆ ರಸ್ತೆ ಸಮರ್ಪಕವಾಗಿ ಬಳಕೆಗೆ ಸಿಗಲಿದೆ. -ರಾಮಣ್ಣ ಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತ https://www.vijayavani.net/continuous-social-work-by-the-organization-2 https://www.vijayavani.net/protecting-the-interests-of-society-and-the-country