

ಶಿಗ್ಗಾಂವಿ: 2020ರ ಬಜೆಟ್ನಲ್ಲಿ ಆಡಳಿತಾತ್ಮಕವಾಗಿ ಜವಳಿ ಪಾರ್ಕ್ಗೆ ಅನುಮತಿ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಜವಳಿ ಪಾರ್ಕ್ ಅಭಿವೃದ್ಧಿಯ ಜತೆಗೆ ನಮ್ಮ ಭಾಗದ ಜನರಿಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಪುರಸಭೆ ಅನುದಾನದಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಿಗ್ಗಾಂವಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮ ರೂಪಿಸಿದ್ದೇವೆ. ಮುಂಬರುವ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಎಲ್ಲರೂ ಸಹಕಾರ ನೀಡಬೇಕು. ಜತೆಗೆ ಸವಣೂರ, ಬಂಕಾಪುರ, ಶಿಗ್ಗಾಂವಿ ನಗರಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪಟ್ಟಣದ 23ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಜಕ್ಕನಕಟ್ಟಿ ಸಿಸಿ ರಸ್ತೆ, ಸಿಡಿ ನಿರ್ವಣ, 21ನೇ ವಾರ್ಡ್ನಲ್ಲಿ 10.80 ಲಕ್ಷ ವೆಚ್ಚದ ಆರ್ಸಿಸಿ ಚರಂಡಿ, ಸಿಸಿ ರಸ್ತೆ, 20ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಆರ್ಸಿಸಿ ಚರಂಡಿ, ವಾರ್ಡ್ 22ರ ಗಾಂಧಿ ನಗರದಲ್ಲಿ 4 ಲಕ್ಷ ರೂ. ವೆಚ್ಚದ ಆರ್ಸಿಸಿ ಚರಂಡಿ ಹಾಗೂ ಬ್ಲಾಕ್ ಅಳವಡಿಸುವ ಕಾಮಗಾರಿ, 10ನೇ ವಾರ್ಡ್ನಲ್ಲಿ 8 ಲಕ್ಷ ರೂ. ವೆಚ್ಚದ ಆರ್ಸಿಸಿ ಮತ್ತು ಸಿಡಿ ನಿರ್ವಣ, 2ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, 9ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಆರ್ಸಿಸಿ ಚರಂಡಿ, ಬ್ಲಾಕ್ ಅಳವಡಿಕೆ, 8ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಆರ್ಸಿಸಿ ಚರಂಡಿ, ಸಿಡಿ ನಿರ್ವಣ, 3ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ವಣ, 4ನೇ ವಾರ್ಡ್ನಲ್ಲಿ 12.75 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ, 7ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಆರ್ಸಿಸಿ ಚರಂಡಿ, ಸಿಸಿ ರಸ್ತೆ, ಬ್ಲಾಕ್ ಅಳವಡಿಕೆ, 12ನೇ ವಾರ್ಡ್ನಲ್ಲಿ 12ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ, 16ನೇ ವಾರ್ಡ್ನಲ್ಲಿ 10 ಲಕ್ಷ ರೂ. ವೆಚ್ಚದ ಆರ್ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಮಂಜು ಬ್ಯಾಹಟ್ಟಿ, ರಾಘವೇಂದ್ರ ಮೇಲಗಿರಿ, ದೇವಣ್ಣ ಚಾಕಲಬ್ಬಿ, ಬಸವರಾಜ ನಾರಾಯಣಪೂರ, ಬಸನಗೌಡ್ರ ರಾಮನಗೌಡ್ರ, ಸಂಜನಾ ರಾಯ್ಕರ, ಉಷಾ ಬಿಳೆಕುದರಿ, ಎಸ್.ಕೆ. ಅಕ್ಕಿ, ರೇಣುಕನಗೌಡ ಪಾಟೀಲ, ಸುಭಾಷ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಯಡಿಯೂರಪ್ಪನವರು ನನ್ನ ಮೇಲೆ ವಿಶ್ವಾಸವಿಟ್ಟು ಗೃಹ ಇಲಾಖೆ ಜತೆಗೆ ಕಾನೂನು ಮತ್ತು ಸಂಸದೀಯ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಈ ದೊಡ್ಡ ಜವಾಬ್ದಾರಿಯನ್ನು ನಿಮ್ಮೆಲ್ಲರ ಆಶೀರ್ವಾದ ಮತ್ತು ನೀವು ಕೊಟ್ಟಿರುವ ಶಕ್ತಿಯ ಮೂಲಕ ಎರಡು ಇಲಾಖೆಗೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. | ಬಸವರಾಜ ಬೊಮ್ಮಾಯಿ ಸಚಿವ