

ಬಾಗಲಕೋಟೆ: ಸಾಮಾಜಿಕ ಕಟ್ಟಳೆಗೆ ಒಳಪಟ್ಟು ನಾಲ್ಕು ಗೋಡೆಗಳಲ್ಲಿಯೇ ಜೀವನ ಕಳೆಯುತ್ತಿರುವ ಸಿö ಕುಲಕ್ಕೆ ಚನ್ನಮ್ಮ ರತ್ನಳಾಗಿ ಪ್ರಜ್ವಲಿಸಿದ್ದಾಳೆ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕೇವಲ ಅಡುಗೆ ಮನೆ ಕೆಲಸಕ್ಕೆ ಸೀಮಿತವಾಗಿದ್ದ ಅಂದಿನ ಹೆಣ್ಣು ಮಕ್ಕಳು ಅನೇಕ ಶೋಷಣೆಗಳಿಗೆ ಒಳಗಾಗಿ ಸಮಾಜದ ದೃಷ್ಠಿಯಲ್ಲಿ ಅಬಲೆಯಾಗಿದ್ದಳು. ಆ ಸಮಯದಲ್ಲಿ ಕಾಕತಿ ದೂಳಪ್ಪ ದೇಸಾಯರ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ಚನ್ನಮ್ಮಳು ಬ್ರೀಟಿಷರ ವಿರುದ್ಧ ಹೋರಾಟ ಮಾಡಿದ ಕನ್ನಡದ ಮೊದಲ ಮಹಿಳೆಯಾಗಿದ್ದಾಳೆ ಎಂದರು.
ಜಮಖಂಡಿಯ ಡಾ.ಶಾರದಾ ಮಳ್ಳೂರ ಮಾತನಾಡಿ, ಒಂದು ಕುಟುಂಬಕ್ಕೆ ಒಬ್ಬ ಗಂಡು ಮಗ ನಿರ್ವಹಿಸ ಬೇಕಾಗಿರುವದಕಿಂತ ಹೆಚ್ಚಿನ ಸಾಹಸ ಮಾಡಿದ ವೀರ ಮಹಿಳೆ ಚನ್ನಮ್ಮ ಎಂದು ಬಣ್ಣಿಸಿದರು.
ಚನ್ನಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರೂ, ಲಿಂಗ ಪೂಜೆ, ಯೋಗ, ಕುದುರೆ ಸವಾರಿ, ಯುದ್ದ ಕಲೆಗಳಲ್ಲಿ ಪರಿಣಿತಳಾಗಿದ್ದಳು. ಅಂಥ ವೀರ ವನಿತೆಯ ಆದರ್ಶ ಕಥೆಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳುವುದಲ್ಲದೇ ಕಿತ್ತೂರಲ್ಲಿರುವ ಸ್ಮಾರಕಗಳ ಬಗ್ಗೆ ಕಲ್ಪನೆ ನೀಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ನಮ್ಮ ಭಾರತ ದೇಶದ ನೆಲದಲ್ಲಿ ಆಚಾರ ವಿಚಾರ ಯೋಗ ಧರ್ಮ ಹೇರಳವಾಗಿ ಇದ್ದರೂ ಇಂದಿನ ಯುವಜನತೆ ಅವನ್ನು ಅನುಸರಿಸುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ಇಂದಿನ ದುಸ್ಥಿತಿ ಏನೆಂದರೆ ಪಾಶ್ಚಾತರು ಭಾರತೀಯ ಸಂಸ್ಕೃತಿ ಗೌರವಿಸುತ್ತಿದ್ದಾರೆ. ಆದರೆ ಇಲ್ಲಿಯ ಯುವ ಜನತೆ ಪಾಶ್ಚಾತರನ್ನು ಅನುಸರಿಸುತ್ತಿದ್ದಾರೆ ಎಂದರು.
ಇಂದಿನ ಯುವಕರು ಸ್ವಾತಂತ್ರ‍್ಯ ಬಗ್ಗೆ ತಿಳಿಯುವದಿಲ್ಲ. ಅದಕ್ಕಾಗಿ ಹೋರಾಡಿ ಹುತಾತ್ಮರಾದವನ್ನು ಸ್ಮರಿಸುತ್ತಿಲ್ಲ. ಹೀಗಾಗಿ ಸ್ವಾತಂತ್ರ‍್ಯದ ಬಗ್ಗೆ ತಿಳುವಳಿಕೆ-ಬಳಸಿಕೊಳ್ಳುವ ಬಗೆ ಹೇಗೆ ಎಂಬುದು ಗೊತ್ತಾಗುತ್ತದೆ. ಯಾವುದೇ ಒಂದು ಸಣ್ಣ ವಿಮರ್ಶೆ ಗೊಂದಲ ಉಂಟುಮಾಡುತ್ತಿರುವುದು ವಿಷಾಧನೀಯ. ಯುವಕರು ಚನ್ನಮ್ಮಳ ಸಾಹಸ ಮತ್ತು ಸ್ವಾತಂತ್ರ‍್ಯದ ಮಹತ್ವ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಮಾಜದ ಮುಖಂಡ ಬಸವರಾಜ ಧರ್ಮಂತಿ ಮಾತನಾಡಿ, ಮಹಾ ಮಣಿಯರು ಮತ್ತು ಮಾತೆಯರ ಸಾಹಸ ರಾಷ್ಟ್ರಮಟ್ಟದಲ್ಲಿ ತಲುಪಿ ರಾಷ್ಟ್ರೀಯ ವ್ಯಕ್ತಿಗಳಾಗಬೇಕಾಗಿದೆ. ಆದರೆ ಇಂದು ಮಹಾ ನಾಯಕರ ಜಯಂತ್ಯೋತ್ಸವಗಳು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸಿದರೇ ಅಗೌರವ ನೀಡಿದಂತಾಗಿರುತ್ತದೆ. ತ್ಯಾಗಿಗಳಿಗೆ ಎಲ್ಲ ಕಾಲಕ್ಕೂ ಎಲ್ಲರಿಂದಲು ಗೌರವ ದೊರೆಯುವಂತಾಗಬೇಕು ಎಂದರು.
ಸಂದರ್ಭದಲ್ಲಿ ಶಾಸಕ ಎಚ್.ವೈ. ಮೇಟಿ ಚನ್ನಮ್ಮ ಸಭಾಭವನಕ್ಕೆ ಹಣ ನೀಡುವುದಾಗಿ ಘೋಷಿಸಿದರು. ಸಮಾಜದ ಮುಖಂಡ ಎಸ್.ಎಂ.ಸಿಂಧೂರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸ್ವಾಗತಿಸಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ರವಿ ಪಟ್ಟಣದ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ನಿಂಗಪ್ಪ ದೊಡಮನಿ ಸೇರಿದಂತೆ ಇತರರು ಇದ್ದರು.