ಸ್ಟಾಲಿನ್ ಹೇಳಿಕೆ ಖಂಡಿಸಿ ಪ್ರತಿಭಟನೆ

0809Klb04
Published on

ಕಲಬುರಗಿ: ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ ತಮಿಳುನಾಡು ಸರ್ಕಾರದಲ್ಲಿ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ನಗರದ ಸೂಪರ್ ಮಾರ್ಕೆಟ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಡಿಎಂಕೆ ಪಕ್ಷದ ನಾಯಕರೂ ಆದ ಸಚಿವ ಸ್ಟಾಲಿನ್ ಕಾರ್ಯಕ್ರಮವೊಂದರಲ್ಲಿ ಸನಾತನ ಹಿಂದೂ ಧರ್ಮದ ಕುರಿತು ಕೀಳಾಗಿ ಹೇಳಿಕೆ ನೀಡಿದ್ದು, ಇದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ಹೇಳಿದ್ದು ಖಂಡನೀಯ ಎಂದರು.
ಹಿAದೂ ಧರ್ಮಕ್ಕೆ ಮಾಡಿರುವ ಅಪಮಾನ ಸನಾತನ ಹಿಂದೂ ಧರ್ಮದ ಋಷಿಮುನಿಗಳು, ಸಾಧುಸಂತರಿಗೆ ಮಾಡಿದ ಅಪಮಾನ. ಭೂಮಿ ಸೃಷ್ಟಿಯ ಜತೆಗೆ ಹಿಂದೂ ಧರ್ಮ ಬಂದಿದೆ ಎಂಬ ಸಣ್ಣ ಅರಿವೂ ಈ ಮಂತ್ರಿಗಿಲ್ಲ ಎಂದು ದೂರಿದರು.
ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಲಕ್ಷಿö್ಮÃಕಾಂತ ಸ್ವಾದಿ, ಶಂಕರ ಚೋಕಾ, ಸಂತೋಷ ಸೋನಾವಣೆ, ದಶರಥ ಇಂಗೋಳೆ, ಭಾಗ್ಯಶ್ರೀ, ಸಂಜನಾ, ಉದಯ ಸುಲ್ತಾನಪೂರ್, ಶಿವು, ಸಂಗು ಕಾಳನೂರು, ವಿಕಾಸ ಸಗರ, ಪ್ರಕಾಶ, ರಾಜು ಕಮಲಾಪುರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net