ಸೋಡಿಗದ್ದೆ ಜಾತ್ರೆಯಲ್ಲಿ ಕೆಂಡ ಸೇವೆ ಸಲ್ಲಿಸಿದ ಭಕ್ತರು

24bkl2 (4)
Published on

ಭಟ್ಕಳ: ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು, ಜಾತ್ರೆಯ ಎರಡನೇ ದಿನವೂ ಸಾವಿರಾರು ಭಕ್ತರು ತಮ್ಮ ಕಾಣಿಕೆಗಳನ್ನು ಒಪ್ಪಿಸಿದರು. ಶುಕ್ರವಾರ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಆವರಣದಲ್ಲಿ ಕೆಂಡ ಸೇವೆ ನಡೆಯಿತು. ತಲೆ, ತಲೆಮಾರುಗಳಿಂದ ದೇವಸ್ಥಾನಕ್ಕೆ ನಡೆದುಕೊಂಡ ಬಂದ ಭಕ್ತರು, ಕಷ್ಟ ಕಾಲದಲ್ಲಿ ಹರಕೆ ಹೊತ್ತ ಮಹಿಳೆಯರು ಸೇರಿ ಎಲ್ಲರೂ ಕೆಂಡಸೇವೆಯಲ್ಲಿ ಭಾಗಿಯಾದರು. ಬೆಳಗ್ಗೆಯೇ ದೇವಸ್ಥಾನದ ಮುಂಭಾಗದಲ್ಲಿ ಕಟ್ಟಿಗೆಗಳಿಗೆ ಬೆಂಕಿ ಹಾಕಿ ಸಿದ್ದಪಡಿಸಿದ ಕೆಂಡದಲ್ಲಿ ಮಹಿಳೆಯರು, ಬಾಲಕರು ಸೇರಿ. ನೂರಾರು ಸಂಖ್ಯೆಯ ಭಕ್ತರು ಪೂಜಾರಿಗಳ ನೇತೃತ್ವದಲ್ಲಿ ಕೆಂಡ ಸೇವೆಯನ್ನು ನೆರವೇರಿಸಿದರು. ಜ.31ರವರೆಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net