

ಕಲಬುರಗಿ: ಅಮೃತ ಭಾರತ್ ಸ್ಟೇಷನ್ ಸ್ಕೀಮ್‌ನಲ್ಲಿ ಸೆಂಟ್ರಲ್ ರೈಲ್ವೆ ಅಡಿ 76 ಸೇರಿ ದೇಶದ 1200 ನಿಲ್ದಾಣಗಳ ಅಭಿವೃದ್ದಿಗೆ ಕೇಂದ್ರ ರೈಲ್ವೆ ಮಂತ್ರಾಲಯ ಯೋಜನೆ ರೂಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಡಿಗಲ್ಲು ನೆರವೇರಿಸಲಿದ್ದಾರೆ ಎಂದು ಸಹಾಯಕ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಡಿಆರ್‌ಎಂ) ಶೈಲೇಂದ್ರಸಿಂಗ್ ಪರಿಹಾರ್ ಹೇಳಿದರು.
ಈ ಯೋಜನೆ ಅಡಿ ಸೊಲ್ಲಾಪುರ ವಿಭಾಗದ ೧೫ ರೈಲ್ವೆ ನಿಲ್ದಾಣ ಅಭಿವೃದ್ದಿಪಡಿಸಲಾಗುತ್ತಿದೆ. ಹೆಚ್ಚುವರಿ ಎಫ್‌ಒಬಿ, ಲಿಫ್ಟ್ ಮತ್ತು ಎಸ್ಕಲೇರ‍್ಸ್, ವೇಟಿಂಗ್ ಹಾಲ್, ಶೌಚಗೃಹ, ಲೈಟಿಂಗ್, ರೈಲ್ವೆ ಇಂಡಿಕೇಟರ್, ಕೋಚ್ ಇಂಡಿಕೇಟರ್ ಬೋರ್ಡ್, ವಾಹನ ನಿಲುಗಡೆ ಸ್ಥಳಾವಕಾಶದ ವಿಸ್ತರಣೆ ಸೇರಿ ಸಮಗ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೊಲ್ಲಾಪುರ ರೈಲ್ವೆ ವಿಭಾಗದ ೨೧೯ ನಿಲ್ದಾಣಗಳ ಪೈಕಿ ೧೫ ಸ್ಟೇಷನ್‌ಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಸೊಲ್ಲಾಪುರ, ಕುರುಡವಾಡಿ, ದೌಂಡ್, ಕಲಬುರಗಿ, ವಾಡಿ, ಶಹಾಬಾದ್, ಗಾಣಗಾಪುರ ಸೇರಿ ೧೫ ರೈಲ್ವೆ ನಿಲ್ದಾಣಗಳು ಅಭಿವೃದ್ಧಿ ಹೊಂದಲಿವೆ. ಕಲಬುರಗಿ ನಿಲ್ದಾಣ ಅಭಿವೃದ್ಧಿಗೆ ೨೯.೫೫ ಕೋಟಿ ರೂ., ಶಹಾಬಾದ್ ೨೬.೭೬ ಕೋಟಿ, ವಾಡಿ ೩೨ ಕೋಟಿ, ಗಾಣಗಾಪುರ ೨೦.೭೮ ಕೋಟಿ, ಸೊಲ್ಲಾಪುರ ೫೫.೮೫ ಕೋಟಿ, ಕೋಪರಗಾಂವ್ ೨೯.೯೪ ಕೋಟಿ, ಅಹ್ಮದ್‌ನಗರ ೩೦.೯೨ ಕೋಟಿ, ದೌಂಡ್ ನಿಲ್ದಾಣಕ್ಕೆ ೪೪.೧೭ ಕೋಟಿ ರೂ. ಸೇರಿ ಸೊಲ್ಲಾಪುರ ವಿಭಾಗದಲ್ಲಿ ೪೫೮.೩೩ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ವಿವರಿಸಿದರು.
ದೇಶ ಸ್ವಾತಂತ್ರÈ ಕಂಡು ೭೬ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸೊಲ್ಲಾಪುರದ ೧೫ ಸೇರಿ ಸೆಂಟ್ರಲ್ ರೈಲ್ವೆ ಅಡಿ ೭೬ ನಿಲ್ದಾಣಗಳ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಸಂಬAಧಿಸಿದAತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶೈಲೇಂದ್ರಸಿAಗ್, ಈ ಪ್ರಸ್ತಾವನೆ ರೈಲ್ವೆ ಮಂಡಳಿ ಎದುರಿಗಿದ್ದು, ಯಾವುದೇ ನಿರ್ಧಾರ ಆಗಿಲ್ಲ ಎಂದು ಚುಟುಕಾಗಿ ಹೇಳಿದರು.
ಕಲಬುರಗಿ ನಿಲ್ದಾಣದ ಪ್ಲಾಟ್ ಫಾರಂ ೧ರಲ್ಲಿ ಭಾನುವಾರ ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ೧೧ಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ನೆರವೇರಿಸಿ ವರ್ಚವಲ್‌ನಲ್ಲಿ ಮಾತನಾಡಲಿದ್ದಾರೆ. ಈ ಸಮಾರಂಭದಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಘ-ಸAಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಗಣ್ಯರು ಭಾಗವಹಿಸಲಿದ್ದಾರೆ. ಕಲಬುರಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶೈಲೇಂದ್ರಸಿAಗ್ ಪರಿಹಾರ್ ಮನವಿ ಮಾಡಿದರು.
ಸೊಲ್ಲಾಪುರ ಡೆಪ್ಯೂಟಿ ಚೀಫ್ ಇಂಜಿನಿಯರ್ ಪ್ರದೀಪ ಬನ್ಸೋಡೆ, ಡಿಪಿಒ ಗಲವೆ, ಎಸಿಎಂ ಹರ್ಷಿತ್ ಬಿಷ್ನೋಯಿ, ದಿನೇಶ ಕನೋಜಿಯಾ, ಹೇಮಂತ್ ಶರ್ಮಾ, ಕಲಬುರಗಿ ನಿಲ್ದಾಣದ ವ್ಯವಸ್ಥಾಪಕ ಪಿ.ಎ. ನರಗುಂದಕರ್, ಶರಣಪ್ಪ ಹದನೂರ, ಸಿದ್ದಾರೆಡ್ಡಿ ಬಲ್ಕಲ್, ಸಂದೀಪ್ ಮಿಶ್ರಾ ಇತರರಿದ್ದರು.