ಸೈಬರ್ ಕ್ರೈಮ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ

bkt-13-6
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ನೀತಿನ ಕುಮಾರ ಮಾತನಾಡಿದರು. ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಇದ್ದರು.
Published on

ಬಾಗಲಕೋಟೆ: ವಿದ್ಯಾರ್ಥಿಗಳಲ್ಲಿ ಸೈಬರ್ ಕ್ರೈಮ್ಬಗ್ಗೆ ಜಾಗೃತಿ ವಹಿಸಬೇಕು ಎಂದು ಬಾಗಲಕೋಟೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಪಿಎಸ್‌ಐ ನೀತಿನ ಕುಮಾರ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಮಹವಿದ್ಯಾಲಯ ಸಭಾಭವನದಲ್ಲಿ ಬುಧವಾರ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಸೈಬರ್ ಕ್ರೈಮ್ ಕರ್ನಾಟಕ ೨ನೇ ಸ್ಥಾನದಲ್ಲಿದೆ, ೯೭ ಪ್ರತಿಶತ್ ವಿದ್ಯಾವಂತರೆ ಸೈಬರ್ ಕ್ರೈಮ್ ಗೆ ಬಲಿಯಾದವರು. ಇದರಿಂದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಲ್ಲಿ ವೈಯಕ್ತಿಕ ಪೋಟೋಗಳನ್ನು ವಿವಿಧ ವಿಷಯಗಳ ದಾಖಲಾತಿಗಳನ್ನು ಹಂಚಿಕೊಳ್ಳಬೇಡಿ, ಅವಗಳ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ, ಅವರಸಕ್ಕೆ ಬಿದ್ದು ಆನಲೈನಲ್ಲಿ ಪಾರ್ಟಟೈಮ್ ಜಾಬ್ ಸೇರಿಕೊಳ್ಳು ದುಡ್ಡು ಹಾಕುವುದು ಬೇಡ ಎಂದು ಸಲಹೆ ನೀಡಿದರು.

ನಕಲಿ ಕಂಪನಿಯ ಹಾವಳಿಗಳು ಹೆಚ್ಚಿವೆ,ಜೊತೆಗೆ ಗೂಗಲ್ ಕಸ್ಟಮರ್ ಕೇರ ನಂಬರಗಳ ಮೂಲಕ ವಂಚನೆ ಪ್ರಕರಣಗಳು ಇವೆ. ನಿಮ್ಮ ವಾಟ್ಸಾಪ್, ಫೇಸಬುಕ್ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ವಯಕ್ತಿಕ ಮಾಹಿತಿಯನ್ನು ಹಾಕದಿರಿ, ಎಟಿಎಂ ಕಾರ್ಡ್, ಮಹಿಳೆಯರಿಗೆ ಆನಲೈನ ಮೆಡಿಕಲ್ ಚೇಕಪ್ ಹೆಸರಿಲ್ಲಿ ದೌರ್ಜನ್ಯಗಳು ಮಹಿಳೆಯರ ಸಾವು ಬದುಕಿನ ಪ್ರಶ್ನೆಗಳಾಗಿವೆ. ವಧು, ವರರ ಅನ್ವೇಷನಾ ಸೈಟ್ ಮುಖಾಂತರ ವಂಚನೆ, ನಕಲಿ ಆನಲೈನ್ ಲೋನ ಆಪ್‌ಗಳು, ಆನಲೈನಿನಲ್ಲಿ ಮಾರ್ಕೆಂಟಿಂಗ್, ಅನಾಮದೇಯ ವ್ಯಕ್ತಿಗಳ ಕರೆಗಳು, ಇವೆಲ್ಲಾ ಸೈಬರ್ ಕ್ರೈಮ್ ಗಳಾಗಿವೆ. ಬಹಳ ಮುಖ್ಯವಾಗಿ ಎಲ್ಲರು ತಮ್ಮ ಆಧಾರ ಕಾರ್ಡ್ ನಲ್ಲಿರುವ ಪಿಂಗರ್ ಪ್ರಿಂಟ್‌ನ್ನು ಲಾಕ್ ಮಾಡಿಸಿ ಎಂದರು.

ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ, ವಿದ್ಯಾರ್ಥಿಗಳು ಮೊಬೈಲ ಬಳಕೆ ಮಾಡುವ ಮುಂಚೆ ಈ ಸೈಬರ್ ಕ್ರೈಯಂ ಗಳ ಬಗ್ಗೆ ಮಾಹಿತಿ ಅರಿತು ಜಾಗೃತಿವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸೈಬರ್ ಕ್ರೈಮ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಸ್.ಎಸ್.ಮೇಲಿನಮಠ, ಐಕ್ಯೂಎಸಿ ನಿರ್ದೇಶಕ ಜಿ.ಎಂ. ನಾವದಗಿ, ಕಾರ್ಯಕ್ರಮದ ಸಂಚಾಲಕ ಕೆ.ಎಸ್.ಅರಬ್ಬಿ, ಎಂ.ಎಚ್.ಜನ್ನಪ್ಪಗೋಳ, ಎಂ.ನಂಜುಂಡಸ್ವಾಮಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net