

ಬಾಗಲಕೋಟೆ: ಕಳೆದ ಒಂದು ವರ್ಷದಲ್ಲಿ ಸೈಬರ್ ಕ್ರೈಮ್ ಅಪರಾಧಿಗಳು ಜಿಲ್ಲೆಯ ಜನರಿಂದ ೫ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾರೆ. ಪ್ರತಿಯೊಬ್ಬರು ಸೈಬರ್ ಕ್ರೈಮ್ ಬಗ್ಗೆ ಜಾಗೃತರಾಗಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಹಾಗೂ ಐಪಿಎಸ್‌ಆಗಿ ಪದೋನ್ನತಿ ಹೊಂದಿದ ಪ್ರಸನ್ ದೇಸಾಯಿ ಹೇಳಿದರು.
ಇಲ್ಲಿಯ ಜ್ಯೋತಿ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ(ಬ್ಯಾಂಕ್) ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಬೈಲ್ ಹೇಗೆ ಬಳಸಬೇಕು ಎಂಬುದರ ಮೇಲೆ ಭವಿಷ್ಯ ನಿಂತಿದೆ. ಮೊಬೈಲ್ ಬಳಕೆ ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಈಚೆಗೆ ಸೈಬರ್ ಕ್ರೈಮ್ ಜಾಸ್ತಿಯಾಗುತ್ತಿದ್ದು, ದೇಶದ ೬೦೦ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂತಹ ಅಪರಾಧ ಪ್ರಕರಣ ನಡೆಯುತ್ತಿವೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿದ್ದುಕೊಂಡು ಸೈಬರ್ ಕ್ರೈಮ್ ಚಾಲಾಕಿಗಳು ಜನರ ಹಣವನ್ನು ಕಂಪ್ಯೂಟರ ಬಳಸಿಕೊಂಡು ಅಮಾಯಕರ, ಶಿಕ್ಷಣವಂತರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ. ದೇಶದ ೩೫ ಹಾರ್ಟಸ್ಪಾಟ ಸ್ಥಳಗಳಲ್ಲಿದ್ದುಕೊಂಡು ಅಪರಾಧವನ್ನು ಎಸಗುತ್ತಿದ್ದಾರೆ ಎಂದು ಎಚ್ಚರಿಸಿದರು.
ನೆಟ್ ಬ್ಯಾಂಕಿಂಗ್, ಎಟಿಎಂ ಬಳಸುವಾಗ, ಏನಾದರೂ ಗಿಪ್ಟ್ ಬಂದಿದೆ ಎಂದು ಆಸೆ ತೋರಿಸುವುದು, ಇನ್ನೂ ಹಲವಾರು ಕಾರಣಗಳನ್ನು ನೀಡಿ ಸೈಬರ್ ಕ್ರೈಮ್ ಅಪರಾಧಿ ಜನರನ್ನು ಮರಳು ಮಾಡಿ ದುಡ್ಡು ಹೊಡೆಯುತ್ತಿದ್ದಾರೆ. ನಿಮ್ಮಿಂದ ಏನಾದರೂ ಹಣಹೋದರೆ (ವರ್ಗಾವಣೆ)ತಕ್ಷಣ ೧೯೩೦ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೆ ಅಪರಾಽಗಳನ್ನು ಪತ್ತೆ ಹಚ್ಚಲು ಸಹಾಯಕಾರಿಯಾಗುತ್ತದೆ ಎಂದರು.
ಮಕ್ಕಳು ಒಳ್ಳೆಯ ಗುರಿಯನ್ನು ಸಾಧಿಸಬೇಕಾದರೆ ಪಾಲಕರು ಅವರಿಗೆ ನೆರವಾಗಬೇಕು. ಪ್ರತಿಭಾವಂತರು ತಮ್ಮ ಗುರಿ ಸಾಧಿಸಲು ನಮ್ಮಿಂದ ಏನಾದರೂ ಮಾರ್ಗದರ್ಶನ ಬೇಕಾದರೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ(ಬ್ಯಾಂಕು) ಅಧ್ಯಕ್ಷ ಮಲ್ಲನಗೌಡ ನಾಡಗೌಡರ ಮಾತನಾಡಿ, ಪ್ರಸಕ್ತ ವರ್ಷ ಬ್ಯಾಂಕು ೧,೧೪,೧೨,೦೦೦ ರೂ. ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕು ಪ್ರಗತಿಯತ್ತ ಸಾಗುತ್ತಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಅಶೋಕ ಲಾಗಲೋಟಿ ಮಾತನಾಡಿ, ೩೪೧ ಸದಸ್ಯರೊಂದಿಗೆ ಆರಂಭಗೊಂಡ ಬ್ಯಾಂಕು ಇಂದು ೬೦೬೨ ಸದಸ್ಯರನ್ನು ಹೊಂದಿ ೪,೯೦,೬೫,೩೩೨ ಶೇರು ಬಂಡವಾಳ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ದಿತ್ವಿಐ ಪಿಯುಸಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಪ್ರಕಾಶ ನ್ಯಾಮಗೌಡರ, ನಿರ್ದೇಶಕ ಸಿದ್ದಣ್ಣ ಕಾಖಂಡಕಿ, ಬಸಲಿಂಗಪ್ಪ ಹೋಕ್ರಾಣಿ, ಅಶೋಕ ಲಾಗಲೋಟಿ, ನಿಂಗಣ್ಣ ಗೋಡಿ, ಬಾಳಪ್ಪ ಹಟ್ಟಿ, ಮುತ್ತಪ್ಪ ಕೆಂಪನ್ನವರ, ಧರಿಯಪ್ಪ ಯಳ್ಳಿಗುತ್ತಿ, ಪ್ರಭಾತಿ ಹೆರಕಲ್, ಪಾರ್ವತಿ ಜಾಗನೂರ, ಪರಸಪ್ಪ ಮಾದರ, ಕಾರ್ಮಿಕ ಇಲಾಖೆಯ ಅಧಿಕಾರಿ ರಮೇಶ ಸುಂಬದ, ಹೆಸ್ಕಾಂ ಸಿಪಿಐ ವೆಂಕಟೇಶ ಮುರನಾಳ, ಅಬಕಾರಿ ಇಲಾಖೆಯ ಸಿಪಿಐ ವೆಂಕಟೇಶ ಮುರನಾಳ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಬಾಬು ನಾಡಗೌಡರ ಇದ್ದರು. ನೀಲಪ್ಪ ಗಾಣಿಗೇರ ನಿರೂಪಿಸಿದರು. ಸಾಧಕರು,