

ಎಚ್.ಡಿ.ಕೋಟೆ: ನಮ್ಮ ಯೋಜನೆಗಳು ಗ್ಲೋಬಲ್ ಲೆವಲ್‌ನಲ್ಲಿದ್ದರೂ ಯೋಚನೆಗಳನ್ನು ಸ್ಥಳೀಯ ಸಂಪನ್ಮೂಲಗಳಿಂದ ಪಡೆದುಕೊಳ್ಳಬೇಕು ಎಂದು ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪರಶಿವಮೂರ್ತಿ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಬೆನ್ನ ಹಿಂದೆ ಮಾತನಾಡುವುದನ್ನು ಬಿಡಬೇಕು, ಬೆನ್ನ ಹಿಂದೆ ಮಾತನಾಡುವವರ ಕುರಿತು ಯೋಚಿಸದಿದ್ದಾಗ ಮಾತ್ರ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದರು.
ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಗೌಡರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳಿಗೆ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಹಣದ ಅವಶ್ಯಕತೆಗೆ ಆನ್‌ಲೈನ್‌ನಲ್ಲಿ ಸಾಲ ನೀಡುವ ಆ್ಯಪ್‌ಗಳತ್ತ ಮುಖ ಮಾಡಿದಾಗ ಸೈಬರ್ ಕ್ರೈಂ ಗಳು ಹೆಚ್ಚಾಗುತ್ತಿವೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತರ ಭಾರತದವರ ಭಾಗವಹಿಸುವಿಕೆ ಹೆಚ್ಚಿದೆ, ಅವರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ದಕ್ಷಿಣ ಭಾರತದ ನಮ್ಮ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು.
ಪ್ರಾಂಶುಪಾಲ ಜೆ.ಎನ್.ವೆಂಕಟೇಶ್ ಮಾತನಾಡಿದರು.
ಎಸ್‌ಬಿಐ ಸಿಬ್ಬಂದಿ ನಾಗೇಂದ್ರ ಕುಮಾರ್, ಉಪನ್ಯಾಸಕರಾದ ಕಲ್ಲೇಶ್‌ಗೌಡ, ಸಿದ್ದೇಗೌಡ, ರಾಮಚಂದ್ರ, ಮಹೇಂದ್ರ, ಚನ್ನಕೇಶವ ನಾಯಕ, ಮಂಜು, ರವೀಶ, ಪ್ರಕಾಶ್ ನಾಯಕ, ರವಿ, ಮಹದೇವ, ಮಹೇಶ್, ಸೋಮಶೇಖರ್, ಸಿದ್ದರಾಜು, ಚಿಕ್ಕದೇವಿ, ಸಂಗೀತಾ, ಅವೀನಾ, ದಿಲೀಪ್, ಚಂದನ, ಶಾಂಭವಿ, ಚಿತ್ರ, ರಾಜೇಶ್ ಇದ್ದರು.