ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಇರಲಿ

bkt-16-9
ಬಾಗಲಕೋಟೆ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಸಿಪಿಐ ಗುರುನಾಥ ಚವ್ಹಾಣ ಮಾತನಾಡಿದರು.
Published on

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ಸಮಯದಲ್ಲಿ ಅಽಕ ಲಾಭದ ಮೋಹಕ್ಕೆ ಬೀಳದೆ ಅವುಗಳ ಬಗ್ಗೆ ಜನತೆ ಜಾಗೃತಿ ವಹಿಸಬೇಕು ಎಂದು ಸಿಪಿಐ ಗುರುನಾಥ ಚವ್ಹಾಣ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಅವರು ಮಾತನಾಡಿದರು.

ಡಿಜಿಟಲ್ ಅರೆಸ್ಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಯವನ್ನು ಹುಟ್ಟಿಸುವುದರ ಮೂಲಕ ವಿದ್ಯಾವಂತರನ್ನೇ ದೋಚಲಾಗುತ್ತಿದೆ. ಇವುಗಳ ಬಗ್ಗೆ ಅರಿವು ಹೊಂದಿ ಜನತೆ ಧೈರ್ಯದಿಂದ ಇದ್ದು ತಮ್ಮ ಆರ್ಥಿಕ ಸಂಪನ್ಮೂಲವನ್ನು ರಕ್ಷಿಸಿಕೊಳ್ಳಬೇಕು.

ವರ್ಕ ಫ್ರಾಮ್ ಹೋಂ ಎಂಬ ವಾಟ್ಸಾಪ್ ಗ್ರುಪ್ ಬಗ್ಗೆಯೂ ಜನತೆ ಎಚ್ಚರದಿಂದಿದ್ದು, ಯಾವುದೇ ಮಾಹಿತಿಯನ್ನು ನೀಡಬಾರದು ಎಂದು ಸಲಹೆ ನೀಡಿದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕೆಲವರು ದರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಆನಲೈನ್ ವ್ಯಹಾರಗಳಿಗೆ ಆಸೆಗೆ ಬಿದ್ದು, ತಮ್ಮ ಹಣವನ್ನು ಕಳೆದುಕೊಂಡ ಹಲವರ ಉದಾಹರಣೆಗಳನ್ನು ಉಲ್ಲೇಖಿಸಿ ಅವುಗಳಿಂದ ದೂರವಿರುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಬಹಳಷ್ಟು ಜಾಗರೂಕತೆಯಿಂದ ಮಾಡುವುದರ ಮೂಲಕ ಇಂತಹ ವಂಚನೆ ಪ್ರಕರಣಗಳಿಂದ ದೂರವಿರಬೇಕು ಎಂದರು.

ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಆಕರ್ಷಕ ಯೋಜನೆಗಳು ಮತ್ತು ಹಲವು ಆಮಿಷಗಳಿಗೆ ಒಳಗಾಗದೆ, ಕಂಪ್ಯೂಟರ ಹಾಗೂ ಅಂತರ್‌ಜಾಲದ ಮೂಲಕ ಜಾಣರೇ ನಡೆಸುವ ಇಂತಹ ಕೃತ್ಯಗಳಿಂದ ರಕ್ಷಣೆ ಪಡೆಯಬೇಕು. ಈ ದಿಶೆಯಲ್ಲಿ ಪೊಲೀಸ ಇಲಾಖೆಯ ಇಂತಹ ಅರಿವಿನ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ, ಜಂಟೀ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ,ಇಲಾಖೆಯ ಬಸವರಾಜ ಶಿವಪೂಜಿ ಕುರಿ ಇದ್ದರು. ವೈ.ಎಚ್.ಗುಡೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net