ಸೈಕ್ಲೋಥಾನ್​ನಲ್ಲಿ ವಿನೋದ ಪ್ರಥಮ

3KWR2
Published on

ಕಾರವಾರ: ನಗರದಲ್ಲಿ ಆಯೋಜಿಸಿದ್ದ 21 ದಿನಗಳ ಸೈಕ್ಲೋಥಾನ್​ನಲ್ಲಿ 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ವಿನೋದ ನಾಯ್ಕ, 18 ವರ್ಷದೊಳಗಿನ ಯುವಕರ ವಿಭಾಗದಲ್ಲಿ ಸಂತೋಷ್ ಬಾಲರಾಜು, ಯುವತಿಯರ ವಿಭಾಗದಲ್ಲಿ ಶ್ರದ್ಧಾ ನಾಯ್ಕ ಮೊದಲ ಸ್ಥಾನ ಪಡೆದರು.

ಫಿಟ್ ಇಂಡಿಯಾ ಅಭಿಯಾನದ ಭಾಗವಾಗಿ ನೆಹರು ಯುವ ಕೇಂದ್ರ ಹಾಗೂ ಕೈಗಾ ಅಣು ವಿದ್ಯುತ್ ನಿಗಮದಿಂದ ಡಿ.14 ರಿಂದ ಜ.3 ರವರೆಗೆ ನಗರದಲ್ಲಿ ಸೈಕ್ಲೋಥಾನ್ ಆಯೋಜಿಸಲಾಗಿತ್ತು.

ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಳ ನಿರ್ದೇಶಕ ಆರ್.ಸತ್ಯನಾರಾಯಣ ಚಾಲನೆ ನೀಡಿದ್ದರು. 49 ಸ್ಪರ್ಧಾಳುಗಳು ಭಾಗವಹಿಸಿದ್ದರು. 21 ದಿನಗಳಲ್ಲಿ 135 ಕಿಲೋಮೀಟರ್ ವ್ಯಾಪ್ತಿಯನ್ನು ಸಂಚರಿಸಿದ್ದರು. ಕೊನೆಯದಾಗಿ ಸ್ಲೋ ಸೈಕ್ಲಿಂಗ್ ಮೂಲಕ ವಿಜೇತರನ್ನು ಆರಿಸಲಾಯಿತು. ವಿಜೇತರಿಗೆ ಬಹುಮಾನವಾಗಿ ಸೈಕಲ್ ನೀಡಲಾಯಿತು.

ಎಸ್​ಪಿ ಶಿವಪ್ರಕಾಶ ದೇವರಾಜು ಬಹುಮಾನ ವಿತರಿಸಿದರು. ಕೈಗಾ ಅಧಿಕಾರಿ ಜಗನ್, ಪ್ರದೀಪ್ ಯುತ್ ಕ್ಲಬ್​ನ ಅಧ್ಯಕ್ಷ ನೂತನ ಜೈನ್, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಯಶವಂತ ಯಾದವ,ಅಕೌಂಟೆಂಟ್ ಮೀರಾ ನಾಯ್ಕ, ಪೂಜಾ ಕಳಸ,ಅನಿಲ ಪರಶುರಾಮ, ಶಿವಪ್ರಸಾದ ಉಪಸ್ಥಿತರಿದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net