ಸೇವೆ ಖಾಯಂಗೊಳಿಸುವ0ತೆ ಆಗ್ರಹ

bkt-11-2
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ನರೇಗಾ ಸಿಬ್ಬಂದಿಗಳು ಹೋರಾಟ ನಡೆಸುತ್ತಿರುವುದು. ಮುಖಂಡರಾದ ಉಜ್ವಲ ಸಕ್ರಿ, ಶಿವರಾಜ ತೋಟಗೇರಿ, ಬಾಹುಬಲಿ ಬಿ., ರೇಣುಕಾ ಅಂಗಡಿ, ರಾಜೇಶ್ವರಿ ಗಡೇದ, ಶಿವು ಗೌಡರ, ಈಶ್ವರ ಬಸರಿ, ಅಜಯ ಸೂಳಿಕೇರಿ, ಶಾಹಿನ ಎಸ್. ಇತರರು ಇದ್ದರು.
Published on

ಬಾಗಲಕೋಟೆ: ನಿಗಽತ ಸಮಯದೊಳಗೆ ವೇತನ ನೀಡಬೇಕು, ನರೇಗಾ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನರೇಗಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಸಿಬ್ಬಂದಿಗಳು ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನೌಕರರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ನರೇಗಾ ಸಿಬ್ಬಂದಿಯನ್ನು ಖಾಯಂ ಮಾಡಿದರೆ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಎಜೆನ್ಸಿಗಳು ಸರಿಯಾದ ಸಮಯಕ್ಕೆ ವೇತನವನ್ನು ಪಾವತಿಸುವುದಿಲ್ಲ, ಸರ್ಕಾರಿ ಸೇವೆಯಂತಹ ನಮ್ಮನ್ನು ಪರಿಗಣಿಸಬೇಕು. ನೌಕರರನ್ನು ಖಾಯಂಗೊಳಿಸಿದರೆ ೩೬೫೭ ಸಿಬ್ಬಂದಿಗಳ ಕುಟುಂಬಕ್ಕೆ ಅನುಕೂಲ ವಾಗಲಿದೆ. ಇಲ್ಲವಾದಲ್ಲಿ ಬೀದಿಗೆ ಬರಲಿದ್ದಾರೆ ಎಂದು ಅಳಲು ತೋಡಿಕೊಂಡರು.

ವೈದ್ಯಕೀಯ ವಿಮೆ, ಸೌಲಭ್ಯ ನೀಡಬೇಕು, ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಈ ವ್ಯವಸ್ಥೆಯಿಂದ ಮುಕ್ತಗೊಳಿಸಿ ನೇರವಾಗಿ ನೇಮಕಾತಿ ಮಾಡಿಕೊಳ್ಳಬೇಕು, ಓಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಜಾಖಂಡ್, ರಾಜ್ಯಸ್ಥಾನ, ಛತ್ತಿಗಢ, ಪಂಜಾಬ ಸೇರಿದಂತೆ ಇತರೆ ರಾಜ್ಯಗಳಲ್ಲಿ ನರೇಗಾ ಸಿಬ್ಬಂದಿಗಳನ್ನು ಖಾಯಂಗೊಳಿಸಿದ್ದು, ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಆಡಳಿತಾತ್ಮಕ ಅನುದಾನ ಶೇ.೬ ರಷ್ಟು ಬಿಡುಗಡೆ ಮಾಡಿದ್ದರು ಸಹ ಕರ್ನಾಟಕ ಸರ್ಕಾರ ಶೇ.೩.೫ ರಿಂದ ಶೇ.೪ ಮಾತ್ರ ವೆಚ್ಚ ಮಾಡುತ್ತಿದ್ದು, ಉಳಿದ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ ನೀಡಲಾಗುತ್ತಿದೆ. ಸಿಬ್ಬಂದಿಗಳ ವೇತನವನ್ನು ಈಗಿನ ಕಾಸ್ಟ್ ಆ-À ಲಿವಿಂಗ್ ಆಧಾರ ಮೇಲೆ ಪರಿಷ್ಕರಣೆ ಮಾಡಬೇಕು, ಪ್ರಯಾಣ ಭತ್ಯೆ, ಈಗ ನೀಡುತ್ತಿರುವ ೨ ಸಾವಿರ ರೂ. ಇದನ್ನು ಸಹ ಪರಿಷ್ಕರಿಸಬೇಕು, ಜಿಲ್ಲಾ ಮಟ್ಟದ ಸಭೆ, ಬೆಂಗಳೂರಿನಲ್ಲಿ ನಡೆಯುವು ಸಭೆಗಳಲ್ಲಿ ಪ್ರತ್ಯೇಕ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

ನರೇಗಾ ಸಿಬ್ಬಂದಿಗಳಿಗೆ ಮನೆ ಬಾಡಿಗೆ ಭತ್ಯೆ ನೀಡಬೇಕು, ನರೇಗಾ ಸಿಬ್ಬಂದಿಗಳಿಗೆ ಪ್ರತ್ಯೇಕ ಶಾಖೆ, ಕೊಠಡಿ, ಪಿಠೋಪಕರಣ ವ್ಯವಸ್ಥೆ ನೀಡಬೇಕು, ಸರ್ಕಾರಿ ನೌಕರರಿಗೆ ಇರುವ ಎಲ್ಲ ಸೌಲಭ್ಯ ಒದಗಿಸಬೇಕು, ಇಎಸ್‌ಐ, ಇಪಿ-À ಹಣವನ್ನು ವೇತನದಲ್ಲಿ ಕಡಿತ ಮಾಡಿದರು ಸಹ ಹೊರಗುತ್ತಿಗೆ ಸಂಸ್ಥೆಗಳು ಇಪಿಎ-ï ಖಾತೆಗೆ ಜಮಾ ಮಾಡುತ್ತಿಲ್ಲ, ೧೫ ವರ್ಷಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಯಾವುದೇ ಸೌಲಭ್ಯಗಳು ನೀಡುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.

ಮುಖಂಡರಾದ ಉಜ್ವಲ ಸಕ್ರಿ, ಶಿವರಾಜ ತೋಟಗೇರಿ, ಬಾಹುಬಲಿ ಬಿ., ರೇಣುಕಾ ಅಂಗಡಿ, ರಾಜೇಶ್ವರಿ ಗಡೇದ, ಶಿವು ಗೌಡರ, ಈಶ್ವರ ಬಸರಿ, ಅಜಯ ಸೂಳಿಕೇರಿ, ಶಾಹಿನ ಎಸ್. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net