ಸೇವಾವಾಲ್ ಮಹಾರಾಜರು ಪವಾಡ ಪುರುಷರು

bkt-15-1
Published on

ಬಾಗಲಕೋಟೆ: ಬಂಜಾರ ಸಮುದಾಯದವರು ಕಾಯಕ ಜೀವಿಗಳಾಗಿದ್ದು, ಶಿವನ ಆಶೀರ್ವಾದಿಂದ ಹುಟ್ಟಿ ಬಂದ ಸಂತ ಸೇವಾಲಾಲ್ ತಪಸ್ಸಿನಿಂದ ಶಕ್ತಿಯನ್ನು ಪಡೆದು ಪವಾಡ ಪುರುಷರಾದವರು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.

ನವನಗರದ ಕಲಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂತ ಸೇವಾಲಾಲ್ ಮಹಾರಾಜರು ಸಮಾಜ ಸುಧಾರಣೆಗೆ ಹತ್ತು ಹಲವಾರು ಪವಾಡಗಳನ್ನು ಮಾಡಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಮಹಾನ್ ಸಂತ ಸೇವಾಲಾಲ್‌ರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆದುಕೊಳ್ಳಬೇಕು. ಪರರ ಸೊತ್ತನ್ನು ಕಳುವು ಮಾಡಬಾರದು. ಪ್ರಾಮಾಣಿಕ ಮತ್ತು ನಂಬಿಕೆಯಿAದ ಕೆಲಸ ಮಾಡಬೇಕು. ಸಂತ ಸೇವಾಲಾಲ್ ತತ್ವ ಹಾಗೂ ವಿಚಾರಧಾರೆಗಳ ಸಾಲುಗಳು ಸಮಾಜವನ್ನು ಬೆಳಗುತ್ತಿದ್ದು, ಆಚರಣೆಯಲ್ಲಿ ಇನ್ನು ಜೀವಂತವಾಗಿವೆ ಎಂದು ತಿಳಿಸಿದರು.

ಚಂದ್ರಶೇಖರ ಕಾಳನ್ನವರ ಮಾತನಾಡಿ, ಸೇವಾಲಾಲ ಒಬ್ಬ ಸನ್ಯಾಸಿ, ಪವಾಡ ಪುರುಷ ಆಗಿರದೇ ಶ್ರೇಷ್ಠ ತತ್ವಜ್ಞಾನಿ, ಸೇನಾನಿ, ಸಾಂಸ್ಕೃತಿಕ ನಾಯಕ, ಕಾಲಜ್ಞಾನಿ, ನಾಟಿವೈದ್ಯ ಹಾಗೂ ಚಾರಿತ್ರಿಕ ಪುರುಷರಾಗಿದ್ದಾರೆ. ಇವರು ಸತ್ತವರ, ಕಷ್ಟದಲ್ಲಿರುವ ಮನೆಗೆ ಹೋಗಿ ಸಾಂತ್ವನ ಹೇಳುವ ಜೊತೆಗೆ ಆತ್ಮಸ್ಥೆÊರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಮಾನವ ಕುಲದ ಉದ್ಧಾರಕ್ಕೆ ತತ್ವ, ಸಿದ್ದಾಂತ ಹಾಗೂ ಚಿಂತನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಮುಖ್ಯವಾಗಿ ಬಂಜಾರ ಸಮುದಾಯ ೩ ಪರಂಪರೆಗಳನ್ನು ದತ್ತು ಪಡೆದುಕೊಂಡಿದ್ದು, ಅದರಲ್ಲಿ ರಾಠೋಡ, ಪಮ್ಮಾರ ಹಾಗೂ ಚವ್ಹಾಣ ಕುಟುಂಬಗಳಾಗಿವೆ. ಸಮಾಜವನ್ನು ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ, ಬೆಳೆಸಿಕೊಂಡು ಬಂದ ಸೇವಾಲಾಲರು ಮುಂದಿನ ಪೀಳಿಗೆಗೆ, ಕಲೆಮಾರಿಗೆ ಬಿಟ್ಟು ಹೋಗಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ. ಕೇವಲ ಜಯಂತಿ ಆಚರಿಸಿದರೇ ಸಾಲದು ಅವರ ವಿಚಾರದಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಮಾರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯಿತಿ ಅಽಕಾರಿ ಎಸ್.ಎಂ.ಕಾAಬಳೆ, ಗ್ಯಾರಂಟಿ ಯೊಜನೆ ಅನುಷ್ಠಾನ ಪ್ರಾಽಕಾರದ ತಾಲೂಕಾ ಅಧ್ಯಕ್ಷ ಎಸ್.ಎಂ.ರಾAಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸೇರಿದಂತೆ ಸಮುದಾಯ ಮುಖಂಡರಾದ ರಂಗನಗೌಡ ಶಿರೂರ, ಬಸಪ್ಪ ನಾಯಕ, ಎಂ.ಬಿ.ನಾಯಕ, ಬಲರಾಮ ಪವಾರ, ರಾಜು ರಾಠೋಡ, ಚಿದಾನಂದ ನಾಯಕ, ಮೋತಿಲಾಲ್ ನಾಯಕ, ತುಕಾರಾಮ ನಾಯಕ, ರಮೇಶ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net