

ಹುಮನಾಬಾದ್: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿ ದೇಶ, ಸಮಾಜ ಸೇವೆ ಜತೆ ದೇವರ ಸೇವೆ ಮಾಡಿದಂತಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಾಬಾದಕರ್ ಹೇಳಿದರು.
ಮದರಗಾಂವದಲ್ಲಿ ಹಳ್ಳಿಖೇಡ(ಬಿ)ದ ಬಸವತೀರ್ಥ ಪದವಿ ಪೂರ್ವ ಕಾಲೇಜಿನಿಂದ ಭಾನುವಾರ ಏರ್ಪಡಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸೇವಾ ಮನೋಭಾವನೆ, ಶಿಸ್ತು, ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕೆಂದು ಎಂದರು.
ಚಳಕಾಪುರದ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನAದ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ಉತ್ತಮ ನಾಗರಿಕರನ್ನು ರೂಪಿಸಲು ಎನ್‌ಎಸ್‌ಎಸ್ ಪೂರಕವಾಗಿದೆ ಎಂದರು.
ಸಂಸ್ಥೆ ಕಾರ್ಯಧ್ಯಕ್ಷ ಕೇಶವರಾವ ತಳಘಟ್ಕರ್ ಮಾತನಾಡಿ, ಶಿಬಿರದಿಂದ ಮಕ್ಕಳಲ್ಲಿ ಶಿಕ್ಷಣದ ಜತೆ ನೈತಿಕ ಮೌಲ್ಯಗಳು ಹೆಚ್ಚುತ್ತವೆ ಎಂದರು.
ಪ್ರಮುಖರಾದ ಸುಭಾಷ ರಾಮಣ್ಣ, ಶಿವಕುಮಾರ ಸ್ವಾಮಿ, ರಾಜಶೇಖರ ಮಾಲಿಪಾಟೀಲ್, ಮಲ್ಲಿಕಾರ್ಜುನ ಮಹೇಂದ್ರಕರ್, ಸೋಮಯ್ಯ ಹಿರೇಮಠ, ವಿ.ಕೆ ದಾಡಿ, ಶಿವಕುಮಾರ ಹುಣಸಿಗೇರ, ಗುಂಡಯ್ಯ ತೀರ್ಥ, ವೀರಶೆಟ್ಟಿ ಪೊಲೀಸ್ ಪಾಟೀಲ್, ಚಂದ್ರಕಾAತ್ ಬಿರಾದಾರ, ವೈಜನಾಥ ಹಳ್ಳಿಖೇಡ, ವೀರಣ್ಣ ಮೊಳಕೆರೆ, ಜೈ ಕುಮಾರ ಸಾಗರ, ಮಲ್ಲಿಕಾರ್ಜುನ ನಾಗೊಂಡ ಇತರರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ನರೇಂದ್ರ ಪಾಟೀಲ್ ಸ್ವಾಗತಿಸಿದರು.