ಸೇವಾ ಭಾರತಿಯಿಂದ ಸಸಿ ನೆಡುವ ಕಾರ್ಯ

bkt-8-9
ಸೇವಾ ಭಾರತಿ ಟ್ರಸ್ಟ್ನ ರಜತ ಮಹೋತ್ಸವದ ಪ್ರಯುಕ್ತ ಎನ್‌ಎಸ್‌ಎಸ್ ಸಹಯೋಗದಲ್ಲಿ ಮುಚಖಂಡಿ ಗ್ರಾಮದಲ್ಲಿ ಸಸಿಗಳನ್ನು ನೆಡಲಾಯಿತು.
Published on

ಬಾಗಲಕೋಟೆ: ಸೇವಾ ಭಾರತಿ ಟ್ರಸ್ಟಿನ ರಜತ ಮಹೋತ್ಸವದ ಪ್ರಯುಕ್ತ  ಮುಚಖಂಡಿ ಗ್ರಾಮದಲ್ಲಿ ಸಸಿಗಳನ್ನು ನೆಡಲಾಯಿತು.
ಬವಿವ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿದ್ದು, ಅದರ ಸಹಯೋಗದಲ್ಲೇ ಸಸಿಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಸೇವಾ ಭಾರತಿ ರಜತ ಮಹೋತ್ಸವ ಸಮಿತಿ ಅಧ್ಯಕ್ಷ, ಬವಿವ ಸಂಘದ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಅವರು ಭಾಗವಹಿಸಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಅದನ್ನು ಕರ್ತವ್ಯ ಪ್ರಜ್ಞೆಯಾಗಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ರಜತ ಮಹೋತ್ಸವ ಉತ್ತರ ಪ್ರಾಂತದ ಕಾರ್ಯದರ್ಶಿ ಪ್ರೊ.ಎಚ್.ಡಿ.ಪಾಟೀಲ ಅವರು ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಒಂದೊAದಾಗಿ ಗೋಚರಿಸಲು ಶುರುವಾಗಿದೆ. ಮುಂದಿನ ಪೀಳಿಗೆ ಸಂರಕ್ಷಿತ ಬದುಕು ನಡೆಸಬೇಕೆಂದು ನಾವುಗಳು ಪರಿಸರ ಉಳುವಿಗೆ ಈಗಿನಿಂದಲೇ ಆದ್ಯತೆ ನೀಡಬೇಕೆಂದರು. ಸೇವಾ ಭಾರತಿ ಟ್ರಸ್ಟ್ ೨೫ ವರ್ಷದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದು, ವರ್ಷವಿಡೀ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ.ಮಾರುತಿ ಪಾಟೋಳಿ ಅವರು ಮಾತನಾಡಿ, ಎನ್‌ಎಸ್‌ಎಸ್ ಸ್ವಚ್ಛತೆ, ಪರಿಸರಕ್ಕೆ ಆದ್ಯತೆ ನೀಡುವ ಕೆಲಸವನ್ನು ಮಾಡುತ್ತಿದೆ. ಸೇವಾ ಭಾರತಿ ಟ್ರಸ್ಟ್ ಜತೆಗೂಡಿ ಕನಿಷ್ಠ ೧ ಸಾವಿರ ಸಸಿಗಳನ್ನು ನೆಟ್ಟು ಅವುಗಳ ಪೋಷಣೆ ಮಾಡಲಿದೆ ಎಂದು ಘೋಷಿಸಿದರು.

ಆರ್‌ಎಸ್‌ಎಸ್‌ನ ನಿಕಟಪೂರ್ವ ಜಿಲ್ಲಾ ಸಂಘಚಾಲಕ ಡಾ. ಸಿ.ಎಸ್.ಪಾಟೀಲ, ಹಿರಿಯ ತಜ್ಞ ಡಾ .ಸುಭಾಸ ಪಾಟೀಲ, ಬವಿವ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಗಣ್ಣ ಶಿರೂರ, ಜಿ.ಎಂ.ಅAಟಿನ, ಪ್ರಭುಸ್ವಾಮಿ ಸರಗಣಾಚಾರಿ,  ರೇಣುಕಪ್ಪ , ಎಂ.ಎಸ್.ಮಠ, ಡಾ.ಸಿ.ಎಸ್.ಪಾಟೀಲ, ಮಹಾಂತೇಶ ಬಣಗಾರ್, ಸ್ವಾಗತ ಸಮಿತಿಯ ಕಾರ್ಯದರ್ಶಿ ಡಾ. ಗಂಗಾಧರ ಅಂಗಡಿ , ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗ ಎಂ.ಎಚ್.ಕಟಗೇರಿ, ಚಂದ್ರು ಹೂಗಾರ, ವಿದ್ಯಾರ್ಥಿಗಳು ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net