ಸೇಬು ಬೆಳೆ ಅನೇಕ ರೈತರಿಗೆ ಪ್ರೇರಣೆ

download (2)
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ
Published on

ಬಾಗಲಕೋಟೆ: ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ï ನಲ್ಲಿ ಬಾಗಲಕೋಟೆ ಜಿ¯್ಲೆಯ ಕುಳಲಿ ಗ್ರಾಮದ ಸೇಬು ಬೆಳೆದ ಶ್ರೀಶೈಲ ತೇಲಿ ಬಗ್ಗೆ ಪ್ರಸ್ತಾಪ ಮಾಡಿರುವದಕ್ಕೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಮಗೆಲ್ಲ ಸೇಬು ಕಾಶ್ಮೀರ,ಶಿಮ್ಲಾ, ಡಾರ್ಜಲಿಂಗನಲ್ಲಿ ಬೆಳೆಯುತ್ತಾರೆ ಅಂತ ಗೊತ್ತು. ಆದರೆ, ಬಾಗಲಕೋಟೆ ಜಿ¯್ಲÉಯ ಕುಳಲಿಯಲ್ಲಿ ಶ್ರೀಶೈಲ ತೇಲಿ ಎನ್ನುವ ರೈತ ಬೆಳೆದಿದ್ದು ಮನ್ ಕೀ ಬಾತ್‌ನಲ್ಲಿ ತೋರಿಸಿದರು. ರೈತ, ಆತನ ಹೊಲ, ಸೇಬು ಬೆಳೆ ತೋರಿಸಿದರು. ಇದೊಂದು ಐತಿಹಾಸಿಕ ಬೆಳವಣಿಗೆ. ಇದರಿಂದ ಅನೇಕ ರೈತರಿಗೆ ಪ್ರೇರಣೆಯಾಗಿದೆ. ಸೇಬು ಬೆಳೆಗಾರರ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net