ಸೇಡಂನಲ್ಲಿ ಮಾದಿಗರ ಸಮಾವೇಶ ೩ರಂದು

madig mandkrishna
Published on

ಕಲಬುರಗಿ: ಮಾದಿಗ ಸಮಾಜದಿಂದ ಮೇ ೩ರಂದು ಸಂಜೆ ೪ಕ್ಕೆ ಸೇಡಂನ ಕ್ರೀಡಾಂಗಣದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದಿಗ ದಂಡೋರಾ ಸಮಿತಿಯ ರಾಷ್ಟ್ರೀಯ ನಾಯಕ ಮಾದಿಗ ಮಂದಕೃಷ್ಣ ನೇತೃತ್ವದಲ್ಲಿ ಮಾದಿಗರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ರಾಜು ವಾಡೇಕಾರ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್‌ಗೆ ಬೆಂಬಲಿಸಿ, ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸೇರಿ ಬಿಜೆಪಿ ರಾಜ್ಯ, ಜಿಲ್ಲಾ ನಾಯಕರು ಹಾಗೂ ೩೦ ಸಾವಿರಕ್ಕೂ ಅಧಿಕ ಮಾದಿಗರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಮುಖರಾದ ಭೀಮಣ್ಣ ಬಿಲ್ಲವ, ಗೋಪಾಲ್‌ರಾವ್ ಕಟ್ಟಿಮನಿ, ಅಂಬಾರಾಯ ಚಲಗೇರಾ, ಮನೋಹರ ಬೀರನೂರ , ಅರವಿಂದ ನಾಟೀಕಾರ, ಪ್ರಲ್ಹಾದ್ ಹಡಿಗಿಲ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net