

ಕಲಬುರಗಿ: ಕೇಂದ್ರ ಕಾರಾಗೃಹದ ಒಳ ಮತ್ತು ಹೊರ ಆವರಣದಲ್ಲಿ ಪಗಳ ನೀರಿನ ದಾಹ ನೀಗಿಸುವುದಕ್ಕಾಗಿ ಅರವಟಿಕೆ ಅಳವಡಿಸುವ ಕರ‍್ಯ ಸೋಮವಾರ ನಡೆಯಿತು. ಕಾರಾಗೃಹದ ಮುಖ್ಯಸ್ಥೆ ಡಾ.ಅನಿತಾ ಆರ್. ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವನ ಸುಂದರ ಬದುಕಿಗೆ ಸ್ಫರ‍್ತಿದಾಯಕ ವಾತಾವರಣ ಪಶು&ಪಗಳಿಂದ ಸಿಗಲಿದ್ದು, ಮೂಕ ಜೀವಿಗಳ ಬದುಕಿಗೆ ಆಹಾರ& ನೀರು ಅವಶ್ಯಕವಾಗಿದೆ. ಅವುಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ರ‍್ತವ್ಯ ಎಂದರು. ಸುಮಾರು ೧೦೦ ಅರವಟಿಕೆಗಳನ್ನು ಗಿಡಗಳಿಗೆ ಕಟ್ಟಿ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ. ಕಚೇರಿ ಅಧೀಕ್ಷಕ ಎಂ.ಎಚ್. ಆಶೇಖಾನ್, ಜೈಲರ್ಗಳಾದ ಸಾಗರ ಪಾಟೀಲ್, ಶ್ರೀಮಂತ ಪಾಟೀಲ್, ಶಾಮ ಬಿದರಿ, ಶಿಕ್ಷಕರಾದ ನಾಗರಾಜ ಮುಲಗೆ ಇತರರಿದ್ದರು.