ಸೆ.೨೭ ರಿಂದ ಕಿವುಡರ ರಾಜ್ಯಮಟ್ಟದ ಕ್ರೀಡಾಕೂಟ

bkt-26-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ಸುನೀಲ ಕಂದಕೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಸಂಚಾಲಕರಾದ ರಾಘವೇಂದ್ರ ಜಾಧವ, ಅಜೀಯ ದೇವನಗಾಂವಿ, ನರಸಿಂಹ ರಾಯಚೂರು, ಪ್ರಕಾಶ ಗೌಡರ, ಸಂತೋಷ ಗಣಿ ಮತ್ತಿತರರು ಇದ್ದರು.
Published on

ಬಾಗಲಕೋಟೆ: ಕರ್ನಾಟಕ ಕಿವುಡಕರ ಕ್ರೀಡಾಕೂಟ ಒಕ್ಕೂಟ, ಬಾಗಲಕೋಟೆ ಜಿಲ್ಲಾ ಕಿವುಡರ ಸಂಘ ಆಶ್ರಯದಲ್ಲಿ ಸೆ.೨೭ ರಿಂದ ೨೯ ವರೆಗೆ ಕಿವುಡರ ರಾಜ್ಯಮಟ್ಟದ ೧೪ ನೇ ಕ್ರೀಡಾಕೂಟ ಬಿವಿವಿ ಸಂಘದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ಸುನೀಲ ಕಂದಕೂರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜ್ಞೆ ಭಾಷೆಯ ಮೂಲಕ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿ, ಸೆ.೨೭ ರಂದು ಬೆಳಗ್ಗೆ ೯ ಗಂಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಽಕಾರಿ ಜಾನಕಿ ಕೆ.ಎಂ., ಇನ್ನರ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರೀಲತಾ ಹೆರಂಜಲ್, ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.


ಇನ್ನು ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ವಿ. ಕುಮಾರ, ಕರ್ನಾಟಕ ಕಿವುಡರ ಕ್ರೀಡಾಕೂಟ ಒಕ್ಕೂಟದ ಕಾರ್ಯದರ್ಶಿ ಜಿ.ಎಸ್. ನವೀನ ಕುಮಾರ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಸುನೀಲ ಕಂದಕೂರ, ಕಾರ್ಯದರ್ಶಿ ರಾಘವೇಂದ್ರ ವ್ಹಿ. ಜಾಧವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಜ್ಯದ ೨೦ ಜಿಲ್ಲೆಗಳ ಕಿವುಡರ ಸಂಘದ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ವಿದ್ಯಾರ್ಥಿ ಗಳಿಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದಿಂದ ಪ್ರತ್ಯೇಕ ಊಟ, ವಸತಿ, ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ನಗರದಲ್ಲಿ ನಡೆಯುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್, ಸೆಟಲ್ ಬ್ಯಾಟ್ಮಿಟನ್, ಹಾಗೂ ಎತ್ತರ ಜಿಗಿತ ಕ್ರೀಡೆಗಳು ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ನಡೆಯ ಲಿದೆ ಎಂದು ತಿಳಿಸಿದರು.

ಸಲಹೆಗಾರ ರಮೇಶ ಪಡಸಲಗಿ ಮಾತನಾಡಿ, ಸೆ.೨೯ ರಂದು ಸಮಾರೋಪ ಹಾಗೂ ಬಹು ಮಾನ ವಿತರಣಾ ಸಮಾರಂಭವು ಸಂಜೆ ೪ ಗಂಟೆಗೆ ಬಸವೇಶ್ವರ ಮೈದಾನದಲ್ಲಿ ನಡೆಯ ಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ವೈ.ಮೇಟಿ, ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಅಂಗವಿಕಲ ಇಲಾಖೆ ಅಽಕಾರಿ ಮಹಾಂತೇಶ ಕೋರಿ, ಹನುಮಂತ ಮಾಚಪ್ಪ ನವರ, ಉದ್ದಿಮೆ ಕಿರಣ ಮೆಳ್ಳಿಗೇರಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಸಂಘದ ಸಂಚಾಲಕರಾದ ರಾಘವೇಂದ್ರ ಜಾಧವ, ಅಜೀಯ ದೇವನಗಾಂವಿ, ನರಸಿಂಹ ರಾಯಚೂರು, ಪ್ರಕಾಶ ಗೌಡರ, ಸಂತೋಷ ಗಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net