ಸೆ.೧೯ ರಂದು ಕರವೇ ಪಾದಯಾತ್ರೆ

bkt-18-7
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರವೇ(ಪ್ರವೀಣ ಶೆಟ್ಟಿ ಬಣ) ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಗಲಕೋಟೆ ಜಿಲ್ಲಾಧ್ಯಕ್ಷ ಮುತ್ತುರಾಜ ಎಸ್. ಅರಗಿನಶೆಟ್ಟಿ, ಮುಖಂಡರಾದ ಚಿದಾನಂದ ಸವದತ್ತಿ, ಮಹಾಂತೇಶ ರಾಠೋಡ ಇದ್ದರು.
Published on

ಬಾಗಲಕೋಟೆ: ಕಳಸಾಬಂಡೂರಿ ಮಹದಾಯಿ ನದಿ ಜೋಡಣೆ ಯೊಜನೆಯನ್ನು ಶೀಘ್ರ ಆರಂಭಿಸಬೇಕು ಒತ್ತಾಯಿಸಿ ಸೆ.೧೯ರಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದಿಂದ ನರಗುಂದ ಪಟ್ಟಣದಿಂದ ಗದಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ(ಪ್ರವೀಣ ಶೆಟ್ಟಿ ಬಣ) ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೧೯ರಂದು ನರಗುಂದ ಪಟ್ಟಣದಿಂದ ನರಗುಂದ ಬಂಡಾಯ ಹೋರಾಟಗಾರರ ವೀರಗಲ್ಲಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗುವುದು. ಬೃಹತ್ ಪಾದಯಾತ್ರೆಯ ಮೂಲಕ ಶಲವಡಿ ಮೂಲಕ ಸೆ.೨೦ ರಂದು ಗದಗ ನಗರವನ್ನು ಪ್ರವೇಶಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಪಾದಯಾತ್ರೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪದಾಧಿಕಾರಿಗಳು, ಸದಸ್ಯರು, ಮತ್ತು ರೈತ ಹೋರಾಟಗಾರರು, ಮಹಿಳೆಯರು, ಹಿರಿಯ ನಾಗರಿಕರು, ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲಾಧ್ಯಕ್ಷ ಮುತ್ತುರಾಜ ಎಸ್. ಅರಗಿನಶೆಟ್ಟಿ ಮಾತನಾಡಿ, ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.

ಮುಖಂಡರಾದ ಚಿದಾನಂದ ಸವದತ್ತಿ, ಮಹಾಂತೇಶ ರಾಠೋಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net