

ಬಾಗಲಕೋಟೆ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.೧೫ ರಂದು ಜಿಲ್ಲೆಯಲ್ಲಿ ೧೦೫ ಕಿ.ಮೀ ಮಾನವ ಸರಪಳಿ ನಿರ್ಮಾಣ ಮಾಡಿ ಏಕ ಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರಕಾರದ ನಿರ್ದೇಶನದ ಮೇರೆ ರಾಜ್ಯಾದ್ಯಂತ ಏಕಕಾಲದಲ್ಲಿ ಬೃಹತ್ ಮಾನವ ಸರಳಿ ನಿರ್ಮಾಣಕ್ಕೆ ರೂಟ್ ಮ್ಯಾಪ್ ನಿರ್ಮಿಸಿದ್ದು, ಆ ರೂಟ್ ಮ್ಯಾಪನಂತೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಸೀತಿಮನಿ ಮಾರ್ಗವಾಗಿ ಸಾಲಹಳ್ಳಿವರೆಗೆ ಒಟ್ಟು ೧೦೫ ಕಿ.ಮೀ ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಅಂದು ಬೆಳಿಗ್ಗೆ ೮.೧೫ ರಿಂದ ೯.೩೦ ವರೆಗೆ ಮಾನವ ಸರಪಳಿ ರಚಿಸಲು ಉದ್ದೇಶಿಸಲಾಗಿದೆ.
ನಮ್ಮ ಸಂವಿಧಾನವು ಪ್ರತಿ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಅಭಿವೃದ್ದಿ, ಧರ್ಮದ ಸ್ವಾತಂತ್ರ‍್ಯದ ಜೊತೆಗೆ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರಕಿಸಿ ಕೊಟ್ಟಿದೆ. ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಭಾರತದ ಕಟ್ಟ ಕಡೆಯ ವ್ಯಕ್ತಿಯ ಸ್ವಾತಂತ್ರ‍್ಯ ನ್ಯಾಯ ಸಮಾನತೆಯನ್ನು ಸಾರುತ್ತದೆ. ಈ ಮಾನವ ಸರಪಳಿಯಲ್ಲಿ ಕನಿಷ್ಟ ೧.೫೦ ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ.
ಈ ಮಾನವ ಸರಪಳಿಯಲ್ಲಿ ಎಲ್ಲ ಸರ್ಕಾರಿ ಅಽಕಾರಿಗಳು, ಸಿಬ್ಬಂದಿಯವರು, ಶಾಲಾ ಕಾಲೇಜಿನ ಶಿಕ್ಷಕಕರು ಪ್ರಾಚಾರ್ಯರು ಹಾಗೂ ಸಹ ಸಿಬ್ಬಂದಿಯವರು ಇದಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಮುಖಂಡರು, ಇತರೆ ಸಂಘ ಸಂಸ್ಥೆಯ ಮುಖಂಡರು, ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೇಲಿನ ರೂಟ್‌ನಲ್ಲಿ ತಮಗೆ ಸಮೀಪವಾಗುವ ಸ್ಥಳದಲ್ಲಿ ಮಾನವ ಸರಪಳಿಯಲ್ಲಿ ಸ್ವ-ಇಚ್ಚೆಯಿಂದ ಭಾಗವಹಿಸಬೇಕು.
ಈ ಮಾನವ ಸರಪಳಿಯು ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಪ್ರಾರಂಭವಾಗಿ ಸಾಲಹಳ್ಳಿಯವರೆಗೆ ಮುಕ್ತಾಯಗೊಳ್ಳುತ್ತದೆ. ಕನಿಷ್ಟ ೧೦೫ ಕಿ.ಮೀ ಈ ಸರಪಳಿಯು ಇದ್ದು, ಹಂತಹಂತದಲ್ಲಿ ನೋಡಲ್ ಅಕಾರಿಗಳನ್ನು ನೇಮಿಸಲಾಗಿದೆ. ೯ ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆಯನ್ನು ಓದಿಸಲಾಗುತ್ತಿದೆ ಎಂದು ಜಿಲ್ಲಾಽಕಾರಿಗಳು ತಿಳಿಸಿದ್ದಾರೆ.