ಸೆ.೧೫ ರಂದು ಮಹಾ ಗಣಪತಿ ಭವ್ಯ ಮೆರವಣಿಗೆ

bkt-14-4
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಮಾತೃ ಭೂಮಿ ಯುವಕ ಮಂಡಳಿ ಸದಸ್ಯ ಅಶೋಕ ಲಿಂಬಾವಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಚಂದು ರಾಮವಾಡಗಿ, ಸುನೀಲ ಬಿ, ವಿಶ್ವನಾಥ ವೈಜಾಪುರ, ವಿರೇಶ ಬಿಜಾಪುರ, ಪ್ರಕಾಶ ನಿರಂಜನ, ನಾಗಯ್ಯ ಮಠಪತಿ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಜಿಲ್ಲೆಯ ಪ್ರಸಿದ್ದಿ ಪಡೆದ ಮಾತೃ ಭೂಮಿ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾ ಗಣಪತಿಯ ಗಣೇಶ ವಿಸರ್ಜನಾ ಮೆರವಣಿಗೆಯು ಸೆ.೧೫ ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸದಸ್ಯ ಅಶೋಕ ಲಿಂಬಾವಳಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃ ಭೂಮಿ ಯುವಕ ಮಂಡಳಿ ಸತತ ೧೧ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಭವ್ಯ ಶೋಭಾಯಾತ್ರೆ ಜರುಗಲಿದೆ ಎಂದರು.

ಭಾರತೀಯ ಸಂಸ್ಕೃತಿಯ ಪ್ರತೀಕ ವಾಧ್ಯಗಳನ ತಂಡಗಳನ್ನು ಕರೆಸುತ್ತಿದ್ದೇವೆ. ಈ ಮೊದಲು ಸೋಲಾಪೂರ, ಕೋಲ್ಹಾಪುರ ದಿಂದ ಡೋಲ್ ತಾಷಾ ಪಥಕ್ ಆಗಮಿಸಿದ್ದವು, ಈ ಬಾರಿ ಸಾಂಗ್ಲಿಯ ೧೩೦ ಜನ ಯುವಕ, ಯುವತಿಯರೊಳಗೊಂಡ ಡೋಲ್ ತಾಷಾ ಪಥಕ್ ತಂಡ ಬರಲಿದೆ. ಉಡುಪಿಯ ೩೦ ಕಲಾ ತಂಡದಿಂದ ಚಂಡಿ ವಾದನ, ಪ್ರಥಮ ಬಾರಿಗೆ ಮಂಗಳೂರಿನ ಓಂಕಾರ ಕುಣಿತ ಭಜನಾ ಮಂಡಳಿಯಿಂದ ಮೆರವಣಿಗೆ ನಡೆಯಲಿದೆ ಎಂದರು.

ನಗರದ ಕಟ್ಟಿ ಆಸ್ಪತ್ರೆಯಿಂದ ಮಧ್ಯಾಹ್ನ ೨.೩೦ ಗಂಟೆಗೆ ಹಿಂದೂ ಮಹಾಗಣಪತಿಯ ಬೃಹತ್ ಶೋಭಾ ಯಾತ್ರೆ ಆರಂಭಗೊಳ್ಳಲಿದೆ. ಶೋಭಾಯಾತ್ರೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಡಾ.ಶಂಕರ ಪಾಟೀಲ, ಡಾ.ಎಚ್.ಆರ್.ಕಟ್ಟಿ ಚಾಲನೆ ನೀಡುವರು. ಮೆರವಣಿಗೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಮುಖಂಡರಾದ ಚಂದು ರಾಮವಾಡಗಿ, ಸುನೀಲ ಬಿ, ವಿಶ್ವನಾಥ ವೈಜಾಪುರ, ವಿರೇಶ ಬಿಜಾಪುರ, ಪ್ರಕಾಶ ನಿರಂಜನ, ನಾಗಯ್ಯ ಮಠಪತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net