ಸೃಜನಶೀಲ ಸಾಹಿತ್ಯದಿಂದ ಸಮಾಜ ಸುದ್ಧೀಕರಣ

bkt-9-8
ಬಾಗಲಕೋಟೆ ನಗರದ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕನ್ನಡ ಸ್ನಾತಕೋತರ ಕೇಂದ್ರ ಹಾಗೂ ಸಂಸ್ಕೃತಿಕ ಚಟುವಟಿಕೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸಂಚಾಲಕ ಡಾ.ಬಸವರಾಜ ಕಲ್ಗುಡಿ ಮಾತನಾಡಿದರು. ಪ್ರಾಚಾರ್ಯ ಎಸ್.ಆರ್. ಮೂಗೂನೂರಮಠ, ಸಾಂಸ್ಕೃತಿಕ ಚಟುವಟಿಕೆಯ ಸಂಯೋಜಕ ಡಾ.ಕೆ.ವಿ.ಮಠ, ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಥೋಡ, ಡಾ.ಕೆ. ಕೆಂಪೇಗೌಡ ಇದ್ದರು.
Published on

ಬಾಗಲಕೋಟೆ: ಸೃಜನಶೀಲ ಸಾಹಿತ್ಯ ಸಾಮಾಜಿಕ ಬದಲಾವಣೆಗೆ ಹಲವಾರು ಆಯಾಮಗಳು ತೆರೆದುಕೊಂಡಿದೆ. ಸಮಾಜದ ಸರ್ವರಂಗಗಳು ದಾರಿ ತಪ್ಪಿದಾಗ ಅದಕ್ಕೆ ಮೊದಲು ಪ್ರತಿಕ್ರಿಯೆ ನೀಡುವುದೆ ಸೃಜನಶೀಲ ಸಾಹಿತ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸಂಚಾಲಕ ಡಾ.ಬಸವರಾಜ ಕಲ್ಗುಡಿ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕನ್ನಡ ಸ್ನಾತಕೋತರ ಕೇಂದ್ರ ಹಾಗೂ ಸಂಸ್ಕೃತಿಕ ಚಟುವಟಿಕೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಪ್ರಾಚೀನ ಕಾಲದಿಂದಲೂ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುತ್ತಾ ಬಂದಿದ್ದು ಇತಿಹಾಸದಲ್ಲಿ ಕಾಣುತ್ತೇವೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದಗಳು ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಮಾಜ ಸುಧಾರಣೆಯ ಕಾರ್ಯ ಮಾಡಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ಒಳ್ಳೆಯ ನಾಗರಿಕರನ್ನು ನಿರ್ಮಿಸುವಲ್ಲಿ ಸಾಹಿತ್ಯ ಅಂತರ್ಗಾಮಿನಿಯAತೆ ಕೆಲಸ ಮಾಡುತ್ತದೆ. ಅಂತರಾತ್ಮದ ವಿಮರ್ಶೆ ಮಾಡಿಕೊಳ್ಳುತ್ತ ವ್ಯಕ್ತಿ, ಕುಟುಂಬ ಹಾಗೂ ಸಮಾಜಗಳ ನಡುವೆ ಸಮನ್ವಯತೆ ಸೃಜನಶೀಲ ಸಾಹಿತ್ಯ ಸಾಽಸಿಕೊಂಡು ಬಂದಿದೆ ಎಂದು ಹೇಳಿದರು.

ಪ್ರಾಚಾರ್ಯ ಎಸ್.ಆರ್. ಮೂಗೂನೂರಮಠ ಮಾತನಾಡಿ, ಸಾಹಿತ್ಯ ಮಾನಸಿಕ ತುಮುಲುಗಳಿಗೆ ಔಷಧ ನೀಡುವ ಸಾಮರ್ಥ್ಯ ಹೊಂದಿದೆ. ಓದುಗ ಎಂದೂ ಒಂಟಿಯಲ್ಲ ಬಹುಮುಖ ಆಯಾಮದ ಬಹುಮುಖ ವ್ಯಕ್ತಿತ್ವಕ್ಕೆ ಸಾಹಿತ್ಯ ಪೂರಕವಾಗಿದೆ ಎಂದು ತಿಳಿಸಿದರು.

ಡಾ.ವಿ.ಎಸ್ ಕಟಗಿಹಳ್ಳಿಮಠ ಸೃಜನಶೀಲ ಸಾಹಿತ್ಯದ ವೈಶಿಷ್ಟತೆಗಳ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕ ಚಟುವಟಿಕೆಯ ಸಂಯೋಜಕ ಡಾ.ಕೆ.ವಿ.ಮಠ, ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಥೋಡ, ಡಾ.ಕೆ. ಕೆಂಪೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net