ಸುಳ್ಳು ಹೇಳಿ, ಮೋಸ ಮಾಡುವುದೇ ಕಾಂಗ್ರೆಸ್ ನೀತಿ

BKT-09-12
ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ೫೨೪ ಮೀಟರ್ ವರೆಗೂ ಬಿಜೆಪಿ ಸರ್ಕಾರದಲ್ಲಿ ಪರಿಹಾರ ಬಿಡುಗಡೆ ಮಾಡಿದ್ದ ಸಂತ್ರಸ್ತರ ಪಟ್ಟಿಯನ್ನು ಬಿಡುಗಡೆ ಮಾಡಿದರು.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ಕ್ಕೆ ಸಂಬಂಧಿಸಿದಂತೆ ಸರ್ಕಾರಗಳ ವಿಳಂಬ ನೀತಿ ವಿರುದ್ಧ ಸಂತ್ರಸ್ತರ ಹೋರಾಟ ಕಾವು ಕಡೆದುಕೊಂಡಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆಗೆ ಮುಳುಗಡೆ ಪ್ರದೇಶವನ್ನು ಎರಡು ಹಂತಗಳಲ್ಲಿ ಭೂ ಸ್ವಾಧೀನಕ್ಕೆ ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ವಿಚಾರವಾಗಿ ಕೈ-ಕಮಲ ಮುಖಂಡರ ಆರೋಪ ಪ್ರತ್ಯಾರೋಪಗಳು ಸರಣಿ ಮುಂದುವರೆದಿದೆ.

ಇದೇ ವಿಚಾರವಾಗಿ ಹಿಂದಿನ ಜಲಸಂಪನ್ಮೂಲ ಇಲಾಖೆ ಸಚಿವ, ಹಾಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಸೋಮವಾರ ಪ್ರೆಸ್ ಕ್ಲಬ್‌ನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ, ತಮ್ಮ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು, ಮೋಸ ಮಾಡುವುದೇ ಕಾಂಗ್ರೆಸ್ ನೀತಿ ಎಂದು ಹರಿಹಾಯ್ದರು.

೨೦೨೨ರಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟದ ಉಪ ಸಮಿತಿ ಸಭೆ ಆಗಿದ್ದು ನಿಜ. ಆ ವೇಳೆ ೫೨೨ ಮೀಟರ್ ಮೀಟರ್ ವರೆಗೆ ಮೊದಲ ಹಂತದಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ಹಣಕಾಸು ಇಲಾಖೆಯವರು ಅಭಿಪ್ರಾಯ ಪಟ್ಟರು. ಈ ಬಗ್ಗೆ ಪ್ರೊಸಿಡಿಂಗ್ ಮಾಡಿದರು. ಆದರೆ, ಅದು ನನ್ನ ಬಳಿ ಬಂದಾಗ ಅದಕ್ಕೆ ವಿರೋಧ ಮಾಡಿ, ಅದನ್ನು ಕೈಬಿಡುವಂತೆ ಸಿಎಂಗೆ ಮನವೊಲಿಸಿದೆ. ಹೀಗಾಗಿ ಅದನ್ನು ಸರ್ಕಾರದ ಆದೇಶವಾಗಿ ಬರಲು ನಾನು ಬಿಡಲಿಲ್ಲ.

೫೨೨ ಮೀಟರ್ ಗೆ ನಿಲ್ಲುಸುವ ಉದ್ದೇಶ ಇದ್ದರೆ, ೫೨೪ ಮೀಟರ್ ವರೆಗೂ ಪರಿಹಾರ ಹೇಗೆ ಕೊಡುತ್ತಿದ್ದೇವು? ಆದರೆ, ಬಳಿಕ ಬಂದ ಸಿದ್ದರಾಮಯ್ಯ ಸರ್ಕಾರ ಆ ಪ್ರೊಸಿಡಿಂಗ್ ಮುಂದಿಟ್ಟುಕೊಂಡು ಸರ್ಕಾರದ ಆದೇಶ ಮಾಡಿ, ಇದೀಗ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಈ ಬಗ್ಗೆ ಸಚಿವ ತಿಮ್ಮಾಪುರ ಜನರಿಗೆ ಸುಳ್ಳು ಹೇಳುತ್ತಿದ್ದಾರೆ.

೩ನೇ ಹಂತದಲ್ಲಿ ೧೮೮ ಗ್ರಾಮಗಳ ಜಮೀನು ಮುಳುಗಡೆ ಆಗುತ್ತವೆ. ೨೦ ಗ್ರಾಮಗಳಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸಬೇಕು. ರೈತರಿಗೆ ಪರಿಹಾರ ಕೊಡಿಎಂದಿದ್ದೇವೆ. ಇದರಲ್ಲಿ ರಾಜಕಾರಣ ಬೆಸರಲ್ಲ, ಯಾರೂ ಬೆರೆಸುವ ಕೆಲಸ ಮಾಡಬಾರದು. ನಾವು ಒಣ ಬೇಸಾಯಕ್ಕೆ ಎಕರೆಗೆ ೨೦ ಲಕ್ಷ ಹಾಗೂ ನೀರಾವರಿಗೆ ೨೪ ಲಕ್ಷ ರೂ. ಎಂದು ಏಕಬೆಲೆ ಘೋಷಿಸಿದೆವೆ. ಆಗ ಇದೇ ಕಾಂಗ್ರೆಸ್‌ನವರು ೪೦ ಲಕ್ಷ ಕೊಡಬೇಕು ಎಂದು ಆಗ್ರಹಿಸಿದ್ದರು. ಈಗ ಅಷ್ಟು ಕೊಡೆಸಲಿ, ಅವರಿಗೆ ಬಂಗಾರದ ಕಿರೀಟ ಹಾಕುತ್ತೇವೆ. ಇಲ್ಲವೆ ನಮ್ಮ ಸರ್ಕಾರ ಘೋಷಿಸಿದ ಪರಿಹಾರ ಕೊಟ್ಟರೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ತಿಳಿಸಿದರು.

ಸಚಿವ ತಿಮ್ಮಾಪುರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಾ ಯೋಜನೆ ವಿಚಾರದಲ್ಲಿ ಸಂತ್ರಸ್ತರ ಜೊತೆ ಮೋಸದಾಟ ಆಗುವುದನ್ನು ನಿಲ್ಲಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಹಾಗೂ ಜನತಾದಳ ಸರ್ಕಾರದಲ್ಲಿ ಮೋಸ ಆಗಿಲ್ಲ. ಅದು ಆಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ. ಹೀಗಾಗಿ ಕಾಂಗ್ರೆಸ್ ಸುಳ್ಳು ಹೇಳಿ, ಮೋಸ ಮಾಡುವುದನ್ನು ನಿಲ್ಲಿಸಿ, ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ಪರಿಹಾರ ಕೊಡೆಸಲಿ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ರಾಜು ನಾಯ್ಕರ್, ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ ಮತ್ತಿತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net