ಸುನೀತಾ ವೀರಪ್ಪಗೌಡ ನೇತೃತ್ವದಲ್ಲಿ ಸಮಿತಿ ರಚನೆ

7 bannur 1
Published on

ಬನ್ನೂರು: ಪಟ್ಟಣದಲ್ಲಿ ಮುಖಂಡ ವೈ.ಎಸ್.ರಾಮಸ್ವಾಮಿ ಹಾಗೂ ಎನ್.ಎಂ.ರಾಮಚಂದ್ರ ಅವರ ನೇತೃತ್ವದಲ್ಲಿ ಬನ್ನೂರು ತಾಲೂಕು ರಚನೆ ಸಂಬಂಧ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡರ ನೇತೃತ್ವದಲ್ಲಿ ಸಮಿತಿ ರಚಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ತಾಲೂಕು ಕೇಂದ್ರ ಮಾಡಲು ಯಾವುದೇ ಅಡೆತಡೆಗಳು ಇಲ್ಲ. ಈಗಾಗಲೇ ಸಚಿವ ಮಹದೇವಪ್ಪ ಅವರೊಂದಿಗೆ ಮಾತನಾಡಿದ್ದು ಅವರು ಬನ್ನೂರನ್ನು ತಾಲೂಕು ಕೇಂದ್ರ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮುಖಂಡ ವೈ.ಎಸ್.ರಾಮಸ್ವಾಮಿ ಮಾತನಾಡಿ, ಎಲ್ಲರ ಬೆಂಬಲದೊಂದಿಗೆ ಬನ್ನೂರು ತಾಲೂಕು ಕೇಂದ್ರವನ್ನಾಗಿಸಲು ಯೋಜನೆ ರೂಪಿಸೋಣ, ಯಾವುದೇ ಸಹಕಾರ ಕೋರಿದರೂ ಅದಕ್ಕೆ ನಾನು ಸಿದ್ಧನಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸೋಣ ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಚಾಮೇಗೌಡ, ಮುಖಂಡರಾದ ಎನ್.ಎಂ.ರಾಮಚಂದ್ರ, ಪದ್ಮನಾಭ್, ರಾಮಲಿಂಗೇಗೌಡ, ಡಾ.ಮಹೇಂದ್ರಸಿಂಗ್‌ಕಾಳಪ್ಪ, ದೊಡ್ಡಸ್ವಾಮಿ, ಶಿವಣ್ಣ, ಸುರೇಶ್, ಪುರುಷೋತ್ತಮ್, ಡಾ.ಬಿ.ಕೆ.ಜ್ಞಾನಪ್ರಕಾಶ್, ನಾರಾಯಣ್, ಸುಬ್ರಹ್ಮಣ್ಯ, ಕಾಳೇಗೌಡ, ಸ್ವಾಮಿ, ರಾಹುಲ್‌ಗೌಡ, ಸುತ್ತಮುತ್ತಲಿನ ಗ್ರಾಮದ ಮುಖಂಡರು, ಯಜಮಾನರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net