ಸುಗ್ರೀವಾಜ್ಞೆ ಕಟ್ಟುನಿಟ್ಟಿನ ಜಾರಿಗೆ ಕ್ರಮ

bkt-17-2
Published on

ಬಾಗಲಕೋಟೆ: ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರಿಗೆ ಯಾವುದೇ ಕಿರುಕುಳ ಉಂಟಾಗಬಾರದೆAಬ ಉದ್ದೇಶದಿಂದ ಜಾರಿಗೆ ತರಲಾದ ಸುಗ್ರೀವಾಜ್ಞೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ.ಹೇಳಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಮೈಕ್ರೋ ಫೆನಾನ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಕ್ರೋ -ಫೆನಾನ್ಸ್ ಹಾವಳಿ ತಡೆಗೆ ಸರ್ಕಾರ ಫೆ.೧೫ ರಂದು ಸುಗ್ರೀವಾಜ್ಞೆ ಹೊರಡಿಸಿದ್ದು, ಜಿಲ್ಲೆಯಲ್ಲಿರುವ ಮೈಕ್ರೋ ಫೆನಾನ್ಸ್ಸಂಸ್ಥೆಗಳು, ಗಿರವಿದಾರರು, ಲೇವಾದೇವಿದಾರರು ಸೇರಿದಂತೆ ಇತರೆ ಸಾಲ ನೀಡಿಕೆ ಏಜೇನ್ಸಿಗಳು ಸುಗ್ರೀವಾಜ್ಞೆ ಜಾರಿಯಾದ ದಿನಾಂಕದಿ0ದ ೩೦ ದಿನಗಳ ಒಳಗಾಗಿ ಜಿಲ್ಲೆಯ ನೋಂದಣಿ ಪ್ರಾಽಕಾರಕ್ಕೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳತಕ್ಕದ್ದು. ಒಂದು ವರ್ಷದ ಅವಽಗೆ ನೋಂದಣಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಜಿಲ್ಲಾಽಕಾರಿಗಳು ನೋಂದಣಿ ಪ್ರಾಽಕಾರಿಯಾಗಿದ್ದು, ನೋಂದಣಿ ಪ್ರಾಽಕಾರದಿಂದ ಈ ಸುಗ್ರೀವಾಜ್ಞೆಯಡಿ ನೋಂದಣಿ ಪಡೆಯದೇ ಯಾವುದೇ ಸಾಲಗಳನ್ನು ಮಂಜೂರು ಮಾಡತಕ್ಕದ್ದಲ್ಲ. ಅಲ್ಲದೇ ಮೈಕ್ರೋ ಫೆನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರ ನೋಂದಣಿಯನ್ನು ಪ್ರಾಽಕಾರವು ರದ್ದುಗೊಳಿಸಬಹುದು ಇಲ್ಲದೇ ರದ್ದುಪಡಿಸಲು ಶಿಪ್ಪಾರಸ್ಸು ಮಾಡಬಹುದಾಗಿದೆ. ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿದಲ್ಲಿ ೧೦ ವರ್ಷಗಳ ಕಾರಾವಾಸ ಹಾಗೂ ೫ ಲಕ್ಷ ರೂ.ಗಳವರೆಗೆ ದಂಡ ವಿಽಸಲಾಗುತ್ತದೆ. ಈ ಆಧ್ಯಾದೇಶದಡಿಯಲ್ಲಿ ಅಪರಾಧಗಳು ಜಾಮೀನುರಹಿತವಾಗಿರುತ್ತದೆ ಎಂದರು.

ಮೈಕ್ರೋ ಫೆನಾನ್ಸ್ಸಂಸ್ಥೆ, ಸಾಲ ನೀಡಿಕೆ ಏಜೇನ್ಸಿ ಅಥವಾ ಲೇವಾದೇವಿದಾರರು ತ್ರೆÊಮಾಸಿಕ ಮತ್ತು ವಾರ್ಷಿಕ ತಃಖ್ತೆಯನ್ನು ಸಲ್ಲಿಸಲು ವಿಫಲವಾದಲ್ಲಿ ಆರು ತಿಂಗಳುಗ ಕಾರಾಗ್ರಹವಾಸದೊಂದಿಗೆ ೧೦ ಸಾವಿರ ರೂ.ಗಳಿಗೆ ವಿಸ್ತರಿಸಬಹುದಾದ ದಂಡ ಹಾಗೂ ಶಿಕ್ಷೆಗೆ ಎರಡನ್ನು ವಿಽಸಬಹುದಾಗಿದೆ. ಈ ಸುಗ್ರೀವಾಜ್ಞೆ ಆರ್.ಬಿ.ಐನೊಂದಿಗೆ ನೋಂದಾಯಿಸಲಾದ ಯಾವುದೇ ಬ್ಯಾಂಕಿ0ಗ್ ಅಥವಾ ಬ್ಯಾಂಕಿAಗೇತರ ಹಣಕಾಸು ಕಂಪನಿಗೆ ಅನ್ವಯಿಸತಕ್ಕದ್ದಲ್ಲ ಎಂದು ತಿಳಿಸಿದರು.

ಸೆಕ್ಷನ್ ೭(೩)ರಡಿ ಪರಿಣಾಮಕಾರಿ ಬಡ್ಡಿದರ, ಸಾಲಕ್ಕೆ ಲಗತ್ತಾಗಿರುವ ಷರತ್ತು ಮತ್ತು ನಿಬಂಧನೆಗಳು, ಸ್ವೀಕರಿಸಿದ ಕಂತು ಮತ್ತು ಮರುಪಾವತಿ ಹಿಂಬರಹಗಳು ಸೇರಿದಂತೆ ಇತರೆ ಮಾಹಿತಿಗಳನ್ನು ಕನ್ನಡದಲ್ಲಿಯೇ ಸಾಲಗಾರರಿಗೆ ನೀಡಬೇಕು. ಅಲ್ಲದೆ ಪೊಲೀಸ್ ಉಪ ಅಽÃಕ್ಷಕರ ದರ್ಜೆಗೆ ಕಡಿಮೆಯಲ್ಲದ ಪೊಲೀಸ್ ಅಽಕಾರಿಯು ಸ್ವತಃ ಪ್ರಕರಣವನ್ನು ದಾಖಲಿಸಿಕೊಳ್ಳಬಹುದಾಗಿದೆ. ಅಲ್ಲದೆ ವಿವಾದಗಳನ್ನು ಇತ್ಯರ್ಥಪಡಿಸಲು ಸರ್ಕಾರವು ಅಽಸೂಚನೆ ಮೂಲಕ ಒಂಬುಡ್ಸ್ ಪರ್ಸನ್ ನೇಮಕ ಮಾಡಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಸಹಕಾರ ಇಲಾಖೆಯ ಉಪನಿಭಂದಕ ದಾನಯ್ಯ ಹಿರೇಮಠ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ ಸೇರಿದಂತೆ ಜಿಲ್ಲೆಯ ಎಲ್ಲ ಮೈಕ್ರೋ ಫೆನಾನ್ಸ್ ಸಂಸ್ಥೆ, ಲೇವಾದೇವಿ, ಗಿರಿವಿದಾರರ ಸಂಸ್ಥೆಗಳ ಪ್ರತಿನಿಽಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net