ಸೀತಾಚಲವಾಸ ವೆಂಕಟೇಶ್ವರನಿಗೆ ವಿಶೇಷ ಪೂಜೆ

bkt-12-6
ನವರಾತ್ರಿ ಅಂಗವಾಗಿ ಬಾಗಲಕೋಟೆ ತಾಲೂಕಿನ ಸೀತಿಮನಿಯಲ್ಲಿರುವ ಸೀತಾಚಲವಾಸ ವೆಂಕಟೇಶ್ವರ ದೇವರಿಗೆ ಶನಿವಾರ ವಿಶೇಷ ಅಲಂಕಾರ ಮಾಡಿರುವುದು.
Published on

ಬಾಗಲಕೋಟೆ: ಪುರಾಣದ ಐತಿಹ್ಯವುಳ್ಳ ತಾಲೂಕಿನ ಸೀತಿಮನಿಯ ಸೀತಾಚಲವಾಸ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ, ಸಡಗರದಿಂದ ಜರುಗಿತು, ನಿತ್ಯವು ವಿಶೇಷ ಪೂಜೆ, ಅಲಂಕಾರ ಗಮನ ಸೆಳೆಯಿತು.

ದೇವಸ್ಥಾನವು ವಿದ್ಯುತ್ ದೀಪಾಲಾಂಕರದಿಂದ ಕಂಗಗೊಳಿಸುತ್ತಿತ್ತು, ಪ್ರತಿ ದಿನ ವೆಂಕಟೇಶ್ವರನಿಗೆ ಸುಪ್ರಭಾತ, ಕಕ್ಕಡಾರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಹಾಗೂ ರಾಯಚೂರಿನ ಸರ್ವೋತ್ತಮ ಆಚಾರ್ಯ ಜೋಶಿ ಅವರ ಶ್ರೀ ವೆಂಕಟೇಶ ಮಹಾತ್ಮ ಪುರಾಣಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ನಿತ್ಯ ಮಧ್ಯಾಹ್ನ ನೈವೇದ್ಯ, ಅನ್ನ ಪ್ರಸಾದ ವಿತರಣೆಯಲ್ಲಿ ನೂರಾರು ಜನ ಭಾಗವಹಿಸಿ ಸ್ವೀಕರಿಸಿದರು.

ಅನಂತ ಕುಲಕರ್ಣಿ, ಶ್ಯಾಮ ಆಲೂರ, ಸಂತೋಷ ಗದ್ದನಕೇರಿ, ಜಗದೀಶ ಮುತ್ತತ್ತಿ, ಜಯತೀರ್ಥ ತಾಸಗಾಂವ ಸಂಗೀತ ಸುಧೆ ಹರಿಸಿದರು. ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ನರಸಿಂಹ ಆಲೂರ, ಗೋಪಾಲ ಆಲೂರ, ಮುರಳಿಧರ ಮಠ, ಮುರಳಿಧರ ಜೋಶಿ ನೇತೃತ್ವದಲ್ಲಿ ಧಾರ್ಮಿಕ, ಪೂಜಾ ಕೈಂಕರ್ಯಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net