ಸಿಲಿಂಡರ್ ಸೋರಿ ಮನೆಗಳಿಗೆ ಬೆಂಕಿ

21 rtl 01
Published on

ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆಯಿಂದಾಗಿ 4 ಮನೆಗಳಿಗೆ ಬೆಂಕಿ ತಗುಲಿ ಹಾನಿಯಾದ ಘಟನೆ ಭಾನುವಾರ ಬೆಳಗ್ಗೆ ಜರುಗಿದೆ.

ಗ್ರಾಮದ ಮಹೇಶಪ್ಪ ಸಣ್ಣಜ್ಜಿ ಎಂಬುವರ ಮನೆಯಲ್ಲಿ ಶಿವಪ್ಪ ಮರಿಯಪ್ಪ ಬೆಳ್ಳೂರ ಬಾಡಿಗೆಗೆ ಇದ್ದರು. ಕುಟುಂಬಸ್ಥರು ಕೂಲಿ ಕೆಲಸಕ್ಕೆ ಹೋದ ವೇಳೆ ಸಿಲಿಂಡರ್ ಸೋರಿಕೆಯಾಗಿ ಮನೆಗೆ ಬೆಂಕಿ ತಗುಲಿದೆ. ಆಭರಣಗಳು, ನಗದು, ಬಟ್ಟೆ, ಧವಸ ದಾನ್ಯ, ಬಾಂಡೆ ಸಾಮಾನುಗಳು, ದಾಖಲಾತಿ ಪತ್ರಗಳು ಸುಟ್ಟು ಕರಕಲಾಗಿವೆ. ಅಲ್ಲದೆ, ಈ ಮನೆಗೆ ಹೊಂದಿಕೊಂಡಿದ್ದ ಹನುಮಂತಪ್ಪ ಸಣ್ಣಜ್ಜಿ, ಮಾರುತಿ ಸಣ್ಣಜ್ಜಿ, ಸಿದ್ದಪ್ಪ ಸಣ್ಣಜ್ಜಿ ಮನೆಗಳ ಮೇಲ್ಛಾವಣಿಗೆ ಬೆಂಕಿ ತಗುಲಿ ಮನೆಯ ಹೆಂಚು, ಪಿಕಾಸಿಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ನಂದಿಸಿದರು.

ರಾಣೆಬೆನ್ನೂರಿನ ಐಡಿಬಿ ಸ್ವಸಹಾಯ ಸಂಘ ಮತ್ತು ಹಿರೇಕೆರೂರು ಗ್ರಾಮೀಣ ಕೂಟದಿಂದ ಸಾಲಕ್ಕೆ ಪಡೆದಿದ್ದ ಹಣವನ್ನು 1 ಲಕ್ಷ 20 ಸಾವಿರ ರೂ. ಅನ್ನು ಮನೆಯಲ್ಲಿ ಇಡಲಾಗಿತ್ತು. ಬೆಂಕಿ ಘಟನೆಯಿಂದಾಗಿ ನಗದು ಸುಟ್ಟು ಹೋಗಿದೆ ಎಂದು ಶಿವಪ್ಪ ಬೆಳ್ಳೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net