

ಬಾಗಲಕೋಟೆ: ದೇಶದ ಇತಿಹಾಸದಲ್ಲೆ ಸರ್ಕಾರದ ಖಜಾನೆ ದುಡ್ಡನ್ನು ಅಕೌಂಟ್ ಮೂಲಕ ವರ್ಗಾವಣೆ ಮಾಡಿಕೊಂಡು ಚುನಾವಣೆಗೆ ಸರಾಯಿ ಖರೀದಿ ಮಾಡಿರಲಿಲ್ಲ. ಇದಕ್ಕೆ ಸಿದ್ದರಾಮಯ್ಯ ಸರ್ಕಾರ ನಾಂದಿ ಹಾಡಿದೆ. ಇವರು ಪಡೆದಿದ್ದು ಕಮಿಷನ್ ಅಲ್ಲ, ಅಽಕೃತವಾಗಿ ನೂರರಷ್ಟು ಹಣ ಹೊಡೆದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ೧೦೦ ಪರ್ಸೆಂಟ್ ಅಕೌಂಟ್ ಪೆ ಸಿಎಂ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದ್ದಾರೆ.
ಬಾಗಲಕೋಟೆ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೆ ಯಾವುದೇ ದಾಖಲೆ ಇಲ್ಲದೇ ನಮ್ಮ ಸರ್ಕಾರದ ಮೇಲೆ ೪೦ ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಇದಕ್ಕೆ ಸಂಬಂಽಸಿದಂತೆ ಮಾನನಷ್ಟ ಮೊಕದ್ದಮೆ ಹೂಡಿದ್ದು, ಈಗಲೂ ರಾಹುಲ್ ಗಾಂಽ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಬೇಲ್ ಪಡೆದುಕೊಂಡು ಹೊರಗಡೆ ಇದ್ದಾರೆ. ಆದರೆ, ಈಗ ಅಕೌಂಟ್ ನಿಂದಲೇ ಹಣ ವರ್ಗಾವಣೆ ಮಾಡಿ ಸಿಕ್ಕು ಬಿದ್ದಿದ್ದಾರೆ. ಸಿಎಂ ಸಹಿ ಇಲ್ಲದೇ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಆಗಿತ್ತಾ? ಹೀಗಾಗಿ ಇದಕ್ಕೆ ನೇರವಾಗಿ ಸಿಎಂ ಹೊಣೆ ಎಂದರು.
ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಕೂಪವಾಗಿರುವ ಸರ್ಕಾರ ತೊಲಗಬೇಕು. ಇನ್ನು ಕೆಲವೇ ದಿನಗಳಲ್ಲಿ ಸಿದ್ದು ಸರ್ಕಾರ ಬೀಳುತ್ತದೆ. ಈಗ ದಿನಗಳನ್ನು ಎಣೆಸುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಾಗೆಯೇ ಈ ಹಗರಣದಲ್ಲಿ ಯಾರೆಲ್ಲ ಇದ್ದಾರೋ ಅವರೆಲ್ಲ ಜೈಲಿಗೆ ಹೋಗುತ್ತಾರೆ. ಸಿದ್ದರಾಮಯ್ಯ ಅವರು ಜೈಲಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗೆ ಕೊಲೆ ಮಾಡಿದವರಿಗೆ ಏನು ಮಾಡಬೇಕು? ಒಳಗೆ ಹಾಕ್ತಿರೋ ಇಲ್ವೊ? ಮತ್ತೆ ಬಡವರು, ದಲಿತರ ಹಣವನ್ನು ಲೂಟಿ ಮಾಡಿ, ಚುನಾವಣೆಗೆ ಸರಾಯಿ ಖರೀದಿ ಮಾಡಲು ಉಪಯೋಗಿಸಿದರೆ ಇವರಿಗೆ ಏನು ಮಾಡಬೇಕು? ಈ ಪ್ರಕರಣದಲ್ಲಿ ಎಲ್ಲರೂ ಒಳಗೆ ಹೋಗುತ್ತಾರೆ. ಈ ದೇಶದಲ್ಲಿ ಸಿಎಂಗೂ ಹಾಗೂ ಜನಸಾಮಾನ್ಯರಿಗೂ ಒಂದೇ ಕಾನೂನು ಇರುವುದು ಎಂದು ಹೇಳಿದರು.
ಇದೆಲ್ಲ ಆಗುವ ಮೊದಲೆ ಮರ್ಯಾದೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಹಿಂದೆ ಬಿಎಸ್‌ಐ ಮೇಲೆ ಗಣಿ ವಿಚಾರದಲ್ಲಿ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಈಗ ಸಿದ್ದರಾಮಯ್ಯ ಅವರು ಕೊಡಬೇಕು. ಕಾಂಗ್ರೆಸ ಹೈಕಮಾಂಡ್ ಸೂಚನೆ ಮೇರಿಗೆ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದ್ದರು. ನಾಗೇಂದ್ರ ಅವರು ಹಣ ವರ್ಗಾವಣೆ ಮಾಡಿದ್ದರು. ಬಳಿಕ ಬೇನಾಯಿ ಖಾತೆಗಳಿಗೆ ವರ್ಗಾವಣೆ ಮಾಡಿ ಚುನಾವಣೆಗೆ ಬಳಸಿಕೊಂಡಿದ್ದಾರೆ. ಅವರೆಲ್ಲರಿಗೂ ಖಂಡಿತ ಶಾಪ ತಟ್ಟಿ, ಶಿಕ್ಷೆ ಅನುಭವಿಸುತ್ತಾರೆ ಎಂದರು.