

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿ ಅವರ ಕುರಿತು ಬಳಸಿರುವ ನಾಯಿ ಪದ ಖಂಡನೀಯ. ನಮಗೆ ನಾಯಿ ಪದ ಬಗ್ಗೆ ಗೌರವ ಇದೆ. ಅತ್ಯಂತ ಪ್ರಮಾಣಿಕ ನಂಬಿಗಸ್ಥ ಜೀವಿ ಬದುಕುವ ನಾಯಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ನಾಯಿ ಪದ ಬಿಜೆಪಿಗೆ ಅನ್ವರ್ಥಕ ನಾಮ. ಬಿಜೆಪಿ ಯಾವತ್ತಿಗೂ ದೇಶ ನಿಷ್ಠೆ, ಸಮಾಜ ನಿಷ್ಠೆ ಮಾಡುತ್ತಾ ಬಂದಿದೆ. ಸಿದ್ದರಾಮಯಯ್ಯ ಹಿರಿಯ ರಾಜಕಾರಣಿಯಾಗಿ ಮೌಲ್ಯಯುತ ಹೇಳಿಕೆ ನೀಡುವ ಸೌಜನ್ಯತೆ ಇಲ್ಲ. ಸಿಎಂ ಸ್ಥಾನಕ್ಕೆ ಗೌರವ ನೀಡಿಲ್ಲ. ಲಘುವಾಗಿ ಮಾತನಾಡುವುದು ತರವಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ನಾಗರಿಕ ಸಮಾಜವು ಭಾರತದ ಪ್ರಜಾಪ್ರಭುತ್ವ ಒಳಗೆ ನಂಬಿಕೆ ಇಟ್ಟುಕೊಂಡಿದೆ. ನಮ್ಮೆಲ್ಲ ಆಚರಣೆ, ಭಾಷೆ ಪಾರ್ಲಿಮೆಂಟರಿ ಡೆಮಾಕ್ರಸಿ ಒಳಗೆ ನಡೆಯುತ್ತೀವೆ. ಪರಸ್ಪರ ಗೌರವಿಸುವುದು ನಮ್ಮ ಕರ್ತವ್ಯ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಇಂದಿರಾ ಗಾಂಧಿಗೆ ಪತ್ರ ಬರೆದಾಗ ಇಂದಿರಾಜಿ ಅಂತ ಸಂಬೋಧಿಸಿದ್ದರು. ಭಾಷೆಯ ಮೌಲ್ಯಯುತ ಬಳಕೆ ಇದರಿಂದ ಸಾಬೀತಾಗಿತ್ತು. ಯಾವತ್ತು ಕಳ್ಳರನ್ನು ನೋಡಿದಾಗ ನಾಯಿ ಬೊಗಳುತ್ತದೆ. ಸಿದ್ದರಾಮಯ್ಯರಂತಹ ಭ್ರಷ್ಟ, ರಾಷ್ಟ್ರ ದ್ರೋಹಿಗಳಿಗೆ ಬಿಜೆಪಿ ಆತಂಕ , ಭಯ ಕಾಡುತ್ತಲೆ ಇರುತ್ತದೆ. ಅವರ ಮಾತು, ಗುಣ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು.
ಮುಖಂಡರಾದ ರಾಜು ನಾಯ್ಕರ, ಬಸವರಾಜ ಯಂಕಂಚಿ, ಸತ್ಯ ನಾರಾಯಣ ಹೇಮಾದ್ರಿ ಸೇರಿದಂತೆ ಇತರರು ಇದ್ದರು.