

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರಕರ ಭಾವಚಿತ್ರವನ್ನು ಮುಸ್ಲಿಂ ಏರಿಯಾದಲ್ಲಿ ಏಕೆ ಅಳವಡಿಸಿದರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಖಂಡನೀಯ. ಕೂಡಲೇ ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಆಗ್ರಹಿಸಿದರು.
ವಿರೋಧ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಮತ ರಾಜಕಾರಣಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು. ಮುಸ್ಲಿಂ ಏರಿಯಾವೇನು ಭಾರತದಲ್ಲಿ ಇಲ್ಲವೇ? ಇಂತಹ ಹೇಳಿಕೆಗಳನ್ನು ದೇಶಭಕ್ತ ಮುಸ್ಲಿಂರು ಸಹ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷದ ಅಧಿನಾಯಕಿ ದಿ. ಇಂದೀರಾ ಗಾಂಧಿ 1970 ರ ಮೇ 28 ರಂದು ಅಂಚೆ ಚೀಟಿ ಬಿಡುಗಡೆ ಮಾಡಿ ದೇಶಪ್ರೇಮ ಮತ್ತು ಧೈರ್ಯಶಾಲಿಯಾಗಿದ್ದರು ಸಾವಕರ್ ಅಂತ ಹೊಗಳಿದ್ದರು. ಆದರೇ ಸಿದ್ದರಾಮಯ್ಯ ಟೀಕೆ ದ್ವಿಮುಖ ಹಾಗೂ ಅಲ್ಪಸಂಖ್ಯಾತರ ತುಷ್ಠಿಕರಣದ ರಾಜಕಾರಣದ ಪರಾಕಾಷ್ಠೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಮುಂದಾಗಿದ್ದರು. ಆ ಸಮಯದಲ್ಲಿ ರಾಜ್ಯದ ಉಚ್ಚ ನ್ಯಾಯಾಲಯವೇ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತನ ಜಯಂತಿ ಏಕೆ ಎಂದು ಪ್ರಶ್ನಿಸಿತ್ತು? ಎನ್ನುವುದು ಮರೆಯಬಾರದು. ಸಾವಕರ ಅವರ ಭಾವಚಿತ್ರ ಹರಿದು ಹಾಕಲು ದುಷ್ಟ, ಮತಾಂಧರಿಗೇನು ಹಕ್ಕಿದೆ ಎಂದು ಕಿಡಿಕಾರಿದ ಅವರು, ಇಂತಹವರ ಭಾವಚಿತ್ರ ಬಿಟ್ಟು ಹೋಗಿದೆ, ಅದನ್ನು ಹಾಕಿ ಎಂದು ಒತ್ತಾಯಿಸಬೇಕಿತ್ತು. ಆದರೆ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ ಹರಿಯುವ ದುಸ್ಸಾಹಸವೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರದ ದಾಹಕ್ಕಾಗಿ ಜೆಡಿಎಸ್ ನಿಂದ ಕಾಂಗ್ರೆಸ್
ದಿರುವ ಅವರು ಇನ್ನು ಮುಂದೆಯಾದರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು. ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ನರೇಂದ್ರ ಕುಪ್ಪಸ್ತ, ರಾಜು ಗಾಣಿಗೇರ ಉಪಸ್ಥಿತರಿದ್ದರು.